ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಆಡಳಿತದ ಚುಕ್ಕಾಣಿ ಹಿಡಿದ ಮೇಲೆ ಭರವಸೆ ನೀಡಿದ್ದ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಈ ಗ್ಯಾರಂಟಿಗಳ ಲಾಭ ಪಡೆಯಲು ಹೋಗಿ ಜನ ಯಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ಇದರ ಭಾಗವಾಗಿಯೇ ಎಪಿಎಲ್, ಬಿಪಿಎಲ್ ಕಾರ್ಡ್ ಗಳ ತಿದ್ದುಪಡಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ.
ಮನೆಯ ಯಜಮಾನಿಗೆ ಸೌಲಭ್ಯಗಳು ಜಾಸ್ತಿ ಸಿಗುತ್ತಿರುವ ಕಾರಣ, ಕಾರ್ಡ್ ದಾರರು ತಿದ್ದುಪಡಿಗೆ ದುಂಬಾಲು ಬಿದ್ದಿದ್ದಾರೆ. ಈ ವಿಷಯ ತಿಳಿದ ಅಧಿಕಾರಿಗಳು ಸುಮಾರು ಒಂದು ಲಕ್ಷದಷ್ಟು ಕಾರ್ಡ್ ಗಳನ್ನು ತಿರಸ್ಕಾರ ಮಾಡಿದ್ದಾರೆ. ರಾಜ್ಯದಲ್ಲಿ ಒಟ್ಟು 24 ಲಕ್ಷ ಎಪಿಎಲ್ ಕಾರ್ಡ್ ದಾರರಿದ್ದಾರೆ. ತಿದ್ದುಪಡಿಗಾಗಿ ಶೇಕಡ 70% ರಷ್ಟು ಎಪಿಎಲ್ ಕಾರ್ಡುದಾರರೇ ಅರ್ಜಿ ಹಾಕಿದ್ದಾರೆ.
ಇನ್ನು ಬಿಪಿಎಲ್ ಕಾರ್ಡ್ ಅರ್ಜಿದಾರರು ತಿದ್ದುಪಡಿಗೆ ಅರ್ಜಿ ಹಾಕಿದ್ದು, ಕಳೆದ 14 ದಿನದಲ್ಲಿ ಸುಮಾರು 53 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದೆ. ತಿದ್ದುಪಡಿಗಾಗಿ ಈ ಹಿಂದೆಯೇ 3.18 ಲಕ್ಷ ಅರ್ಜಿಗಳು ಬಾಕಿ ಇತ್ತು. ಇದೀಗ ಒಟ್ಟು 1.17 ಲಕ್ಷ ಅರ್ಜಿಗಳ ತಿದ್ದುಪಡಿಗೆ ಆಹಾರ ಇಲಾಖೆ ಅನುಮತಿ ನೀಡಿದೆ. ಆಹಾರ ಇಲಾಖೆಯಿಂದ ಬರೋಬ್ಬರಿ 93 ಸಾವಿರ ಅರ್ಜಿಗಳು ವಜಾಗೊಂಡಿದೆ.