ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ, (ಮೇ.10) : ಇಲ್ಲಿನ ರೋಟರಿ ಬಾಲಭವನದ ಸಮೀಪವಿರುವ ಜಿಲ್ಲಾ ವೀರಶೈವ ಲಿಂಗಾಯತ ಹೇಮರಡ್ಡಿ ಮಲ್ಲಮ್ಮ ಸಮಾಜದ ಕಚೇರಿಯಲ್ಲಿ ಬುಧವಾರ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು.
ಹೇಮರಡ್ಡಿ ಮಲ್ಲಮ್ಮ ಫೋಟೋಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಜಿಲ್ಲಾ ವೀರಶೈವ ಲಿಂಗಾಯತ ಹೇಮರಡ್ಡಿ ಮಲ್ಲಮ್ಮ ಸಮಾಜದ ಅಧ್ಯಕ್ಷ ಚಿದಾನಂದಪ್ಪ ಆರು ನೂರು ವರ್ಷಗಳ ಹಿಂದೆ ಶ್ರೀಶೈಲದ ವೆಲಟೂರು ಜಿಲ್ಲೆಗೆ ಸೇರಿದ ರಾಮಪುರದಲ್ಲಿ ರಾಮರೆಡ್ಡಿ ಗೌರಮ್ಮ ದಂಪತಿಗಳ ಮಗಳಾಗಿ ಜನಿಸಿದ ಹೇಮರಡ್ಡಿ ಮಲ್ಲಮ್ಮ ಚನ್ನಮಲ್ಲಿಕಾರ್ಜುನನ ಭಕ್ತೆಯಾಗಿದ್ದಳು.
ವಿವಾಹದ ನಂತರ ತನ್ನ ಅತ್ತೆ, ನಾದಿನಿಯವರ ಕಾಟವನ್ನು ಸಹಿಸಿಕೊಂಡು ಎಲ್ಲರ ಮನಗೆದ್ದಂತ ಮಹಾನ್ ಶಿವಶರಣೆ ಎಂದು ಸ್ಮರಿಸಿದರು.
ಹೇಮರಡ್ಡಿ ಮಲ್ಲಮ್ಮ ಕೇವಲ ಶಿವಶರಣೆಯಷ್ಟೆ ಅಲ್ಲ. ತ್ಯಾಗ, ಪರಾಕ್ರಮ, ಶ್ರದ್ದೆ, ಭಕ್ತಿಗೆ ಹೆಸರಾಗಿದ್ದವರು. ಅವರ ತತ್ವ ಸಿದ್ದಾಂತಗಳನ್ನು ಜೀವನದಲ್ಲಿ ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ವೀರಶೈವ ಲಿಂಗಾಯತ ಹೇಮರಡ್ಡಿ ಮಲ್ಲಮ್ಮ ಸಮಾಜದ ಕಾರ್ಯದರ್ಶಿ ಟಿ.ಟಿ.ಶಿವಾನಂದಪ್ಪ, ಉಪ ಕಾರ್ಯದರ್ಶಿ ಸತೀಶ್, ಖಜಾಂಚಿ ಬಸವರಾಜಪ್ಪ, ನಿರ್ದೇಶಕರುಗಳಾದ ನ್ಯಾಯವಾದಿ ವಿಶ್ವನಾಥ್, ಆರ್.ಡಿ.ತಿಪ್ಪೇಸ್ವಾಮಿ, ಡಾ.ಮಹಂತೇಶ್, ಶಶಿಧರ್, ವಕೀಲರುಗಳಾದ ನೀತಜ, ರಘು, ದಯಾನಂದಪಾಟೀಲ್, ನಾಗರಾಜ್ ಸಂಗಂ, ಸಮಾಜದ ಎಲ್ಲಾ ಬಂಧುಗಳು ಜಯಂತಿಯಲ್ಲಿ ಪಾಲ್ಗೊಂಡಿದ್ದರು.