ಜಮಖಂಡಿಯ ಬಿದರಿ ಕಲ್ಮಠದ ಶಿವಲಿಂಗ ಶ್ರೀಗಳು ಲಿಂಗೈಕ್ಯ..!

suddionenews
1 Min Read

 

 

ಬಾಗಲಕೋಟೆ: ಜಮಖಂಡಿ ತಾಲೂಕಿನ ಬಿದರಿ ಕಲ್ಮಠದ ಶಿವಲಿಂಗ ಶ್ರೀಗಳು ಇಂದು ಲಿಂಗೈಕ್ಯರಾಗಿದ್ದಾರೆ. ಹೃದಯಾಘಾತದಿಂದ ಎಲ್ಲರನ್ನು ಬಿಟ್ಟು ಅಗಲಿದ್ದಾರೆ. ಅಪಾರ ಪ್ರಮಾಣ ಭಕ್ತರನ್ನು ಬಿಟ್ಟು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ. ಸದ್ರೀಗಳಿಗೆ 62 ವರ್ಷ ವಯಸ್ಸಾಗಿತ್ತು. ಮಠದ ಶ್ರೀಗಳಿಗೆ ಅಪಾರ ಸಂಖ್ಯೆಯಲ್ಲಿ ಭಕ್ತರಿದ್ದಾರೆ. ಈ ಮಠವು ಸವದತ್ತಿ, ಗುಲಗಾಲಜಂಬಗಿಯಲ್ಲಿ ಶಾಖಾ ಮಠವನ್ನು ಹೊಂದಿದೆ. ಬಿದರಿಯಲ್ಲಿಯೇ ಮೂಲ‌ಮಠವಿತ್ತು.

ಶಿವಲಿಂಗ ಶ್ರೀಗಳು ಐದನೆ ಸ್ವಾಮೀಜಿಯವರಾಗಿ ಪೀಠವನ್ನು ಅಲಂಕರಿಸಿದ್ದರು. 1986ರಿಂದ ಪೀಠಾಧ್ಯಕ್ಷರಾಗಿದ್ದರು. ಹೃದಯಾಘಾತದಿಂದ ಭಕ್ತರನ್ನು ಅಗಲಿದ್ದಾರೆ. ಇಂದು ಮಠದಲ್ಲಿಯೇ ಶ್ರೀಗಳ ಪಾರ್ಥೀವ ಶರೀರವನ್ನು ದರ್ಶನಕ್ಕೆ ಇಡಲಾಗಿದೆ. ಸಂಜೆಯ ತನಕ ದರ್ಶನಕ್ಕೆ ಇಡಲಾಗಿದ್ದು, ಸಂಜೆಯ ಮೇಲೆ ಅಂತ್ಯ ಸಂಸ್ಕಾರ ಮಾಡಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *