ಚಿತ್ರದುರ್ಗ, (ಏ.17) : ಜೂನ್ ಕೂನೆಯ ವಾರ ಅಥವಾ ಜುಲೈ ಮೊದಲ ವಾರದಲ್ಲಿ ಶಿವದಾಸಿಮಯ್ಯ ಜಯಂತಿ, ಪ್ರತಿಭಾ ಪುರಸ್ಕಾರ, ಹಾಗೂ ಸಮಾಜದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.
ನಗರದ ದೊಡ್ಡಪೇಟೆಯ ಸಂಪಿಗೆ ಸಿದ್ದೇಶ್ವರ ಶಾಲೆಯಲ್ಲಿ ಭಾನುವಾರ ನಡೆದ ಶ್ರೀ ಜಿಲ್ಲಾ ಲಿಂಗಾಯತ ಶಿವಶಿಂಪಿ ಸಮಾಜ ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಜಯದೇವ ಮೂರ್ತಿ ಕಳೆದ ಎರಡು ವರ್ಷದಿಂದ ಕರೋನಾದ ಹಿನ್ನಲೆಯಲ್ಲಿ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಗಿತ್ತು. ಈ ಬಾರಿ ಅದ್ದೂರಿಯಾಗಿ ಆಚರಣೆ ಮಾಡಲು ತೀರ್ಮಾನಿಸಿದ್ದು, ಇದಕ್ಕೆ ಬೇಕಾದ ಸಿದ್ದತೆಯನ್ನು ಈಗಿನಿಂದಲೇ ಮಾಡಲು ನಿರ್ಣಯ ಕೈಗೊಳ್ಳಲಾಯಿತು.
ಯಾವುದೇ ಒಂದು ಕಾರ್ಯಕ್ರಮ ಮಾಡಲು ಒಗ್ಗಟು, ಸಹಕಾರ, ಸಹಾಯ ಮತ್ತು ಆರ್ಥಿಕತೆ ಅಗತ್ಯವಾಗಿದೆ. ಇದರಿಂದ ಮಾತ್ರ ಸಮಾಜ ಪ್ರಗತಿಯನ್ನು ಹೊಂದಲು ಸಾಧ್ಯವಿದೆ. ಇಂದಿನ ಯುವಜನತೆಯಲ್ಲಿ ಅಚಾರ, ವಿಚಾರ, ಸಂಸ್ಕೃತಿ, ಗುರುಹಿರಿಯಲ್ಲಿ ಭಕ್ತಿಯನ್ನು ಮೂಡಿಸುವ ಕಾರ್ಯವಾಗಬೇಕಿದೆ. ನಾವು ಮಾಡುವ ಪ್ರತಿಭಾ ಪುರಸ್ಕಾರ ಬೇರೆಯವರಿಗೆ ಮಾರ್ಗದರ್ಶನವಾಗಬೇಕಿದೆ ಎಂದು ಜಯದೇವ ಮೂರ್ತಿ ತಿಳಿಸಿದರು.
ಎಸ್.ಎಸ್.ಎಲ್.ಸಿ. ಮತ್ತು ದ್ವೀತಿಯ ಪಿಯು ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಹಿನ್ನಲೆಯಲ್ಲಿ ಪರೀಕ್ಷೆಯ ಫಲಿತಾಂಶ ಬಂದ ನಂತರ ಶೇ.85 ರಷ್ಟು ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನ ಮಾಡಲು ತೀರ್ಮಾನಿಸಿದ್ದು, ಈ ಎರಡು ತರಗತಿಗಳ ಫಲಿತಾಂಶ ಬಂದ ನಂತರ ಜೂನ್ ಕೂನೆಯ ವಾರ ಅಥವಾ ಜುಲೈ ಮೊದಲ ವಾರದಲ್ಲಿ ಈ ಕಾರ್ಯಕ್ರಮ ಮಾಡಲು ತೀರ್ಮಾನ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಕಳೆದ 4 ವರ್ಷದಿಂದ ಸಮಾಜದ ನೊಂದಾಣಿಯನ್ನು ನವೀಕರಿಸಿಲ್ಲ ಅದನ್ನು ಸಹಾ ಮಾಡಲು ಒಬ್ಬರಿಗೆ ಜವಾಬ್ದಾರಿಯನ್ನು ನೀಡಲು ಸೂಚಿಸಿದ್ದು, ಮಹಿಳಾ ಘಟಕದವರು ನಡೆಸುವ ಕಾರ್ಯಕ್ರಮಕ್ಕೆ ಸಮಾಜದವತಿಯಿಂದ ದಾಸೋಹಕ್ಕೆ ಎಂದಿನಂತೆ ಸಹಾಯವನ್ನು ನೀಡಲು ಸಹಾ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಮಾಜದಲ್ಲಿ ಹಿರಿಯರಿಗೆ ಸನ್ಮಾನ ಮಾಡುವ ಬದಲು ಏನಾದರೂ ಸಾಧನೆ ಮಾಡಿದವರಿಗೆ ವಯಸ್ಸಿನ ಮಿತಿ ಇಲ್ಲದೆ ಸನ್ಮಾನ ಮಾಡಬೇಕೆಂಬ ನಿರ್ಣಯಕ್ಕೆ ಸಭೆ ಸಮ್ಮತಿಸಿತು. ಇದೇ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಚಿತ್ರದುರ್ಗ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ನಿರ್ಮಲ ಬಸವರಾಜು ರವರನ್ನು ಸನ್ಮಾನಿಸಲಾಯಿತು.
ಸಮಾಜದ ಮುಖಂಡರಾದ ಎಸ್. ವೀರೇಶ್, ಡಿ.ಬಿ.ಶಿವಹಾಲಪ್ಪ, ಬಕ್ಕೇಶ್, ಭಾಗವಹಿಸಿದ್ದರು. ಶ್ರೀಮತಿ ನಿರ್ಮಲ ಪ್ರಾರ್ಥಿಸಿದರೆ, ಪಂಚಾಕ್ಷರಿ ಸ್ವಾಗತಿಸಿದರೆ, ಗಂಗಾಧರಪ್ಪ ವಂದಿಸಿದರು. ಕಾರ್ಯದರ್ಶಿ ಮಲ್ಲಿಕಾರ್ಜನ್ ಕಾರ್ಯಕ್ರಮವನ್ನು ನಿರೂಪಿಸಿದರು.