ಬೀದರ್: ಲೋಕಸಭಾ ಚುನಾವಣೆಗೆ ಈಗಾಗಲೇ ಭರ್ಜರಿ ತಯಾರಿ ನಡೆದಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಜೋರು ಫೈಟ್ ನಡೆಯುವ ಸಾಧ್ಯತೆಯೂ ಇದೆ. ಗೆಲುವಿಗಾಗಿ ಈಗಾಗಲೇ ತಂತ್ರಗಾರಿಕೆ ಶುರುವಾಗಿದೆ. ಈ ಮಧ್ಯೆ ಸ್ವಾಮೀಜಿ ಒಬ್ಬರು ಬಿಜೆಪಿ ಟಿಕೆಟ್ ಗಾಗಿ ಯುಪಿ ಸಿಎಂ ಯೋಗಿ ಆದಿತ್ಯಾನಾಥ್ ಅವರನ್ನು ಭೇಟಿ ಮಾಡಿದ್ದಾರೆ.
ಬೀದರ್‌ನಲ್ಲಿ ಈ ಬಾರಿಯೂ ಭಗವಂತ್ ಖೂಬಾ ಸ್ಪರ್ಧೆ ಮಾಡುವುದು ಪಕ್ಕಾ ಆಗಿದೆ. ಆದರೆ ಭಗವಂತ್ ಖುಬಾ ಬಗ್ಗೆ ಬಿಜೆಪಿಯಲ್ಲಿಯೇ ವಿರೋಧಗಳು ವ್ಯಕ್ತವಾಗಿವೆ. ಈ ಬೆಲಕವಣೊಗೆಯ ನಡುವೆಯೇ ಶಿವಾಚಾರ್ಯ ಸ್ವಾಮೀಜಿ ಬೀದರ್ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಬೀದರ್ ಲೋಕಸಭಾ ಚುನಾವಣೆಯ ಟಿಕೆಟ್ ಗಾಗಿ ಶಂಭುಲಿಂಗ ಶಿವಚಾರ್ಯ ಸ್ವಾಮೀಜಿಯ ನಿಯೋಗವೂ ಆರ್ ಎಸ್ ಎಸ್ ಮುಖಂಡರು ಮತ್ತು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದೆ. ಈ ಬಾರಿಯ ಟಿಕೆಟ್ ಅನ್ನು ಶಿವಚಾರ್ಯ ಅವರಿಗೆ ನೀಡಬೇಕೆಂದು ಮನವಿ ಮಾಡಿದೆ.
ಶಿವಾಚಾರ್ಯ ಸ್ವಾಮೀಜಿ ಅವರು ಕೂಡ ಈ ಬಾರಿಯ ಟಿಕೆಟ್ ಗಾಗಿ ಬಿಜೆಪಿ ನಾಯಕರಲ್ಲಿ ಮನವಿ ಮಾಡಿದ್ದಾರೆ. ಮಠಾಧೀಶರಿಗೆ ಟಿಎಕಟ್ ನೀಡುವುದರಿಂದ ಆಗುವ ಲಾಭಗಳೇನು ಎಂಬುದನ್ನು ತಿಳಿಸಿದ್ದಾರೆ. ಇಮ್ನೂ ಬೀದರ್ ಸಂಸದ ಭಗವಂತ್ ಖೂಬಾ ಯಾವುದೇ ರೀತಿಯ ಅಭಿವೃದ್ಧಿ ಮಾಡಿಲ್ಲ. ಹೆಸರಿಗಷ್ಟೇ ಸಂಸದರಾಗಿದ್ದಾರೆ ಎಂದು ಅವರ ವಿರುದ್ಧ ಬೇಸರಗಳು ಕೇಳಿ ಬಂದಿವೆ. ಈ ಬೆನ್ನಲ್ಲೇ ಮಠಾಧೀಶರು ಟಿಕೆಟ್ ಗಾಗಿ ಮನವಿ ಮಾಡಿದ್ದಾರೆ.