ಚಿಕಿತ್ಸೆಗೆಂದು ಅಮೆರಿಕಾಗೆ ತೆರಳುತ್ತಿರುವ ಶಿವಣ್ಣ : ಸುದೀಪ್, ಬಿಸಿ ಪಾಟೀಲ್ ಸೇರಿದಂತೆ ಆತ್ಮೀಯರಿಂದ ಹಾರೈಕೆ

suddionenews
1 Min Read

ಶಿವರಾಜ್‍ಕುಮಾರ್ ಕನ್ನಡದ ಕಣ್ಮಣಿ. ಕನ್ನಡ ಇಂಡಸ್ಟ್ರಿಯ ದೊಡ್ಮನೆಯ ಕುಡಿ. ವರ್ಷಕ್ಕೆ ಹಲವು ಸಿನಿಮಾಗಳನ್ನು ಮಾಡುವ ಮೂಲಕ ನಿರ್ದೇಶಕ, ನಿರ್ಮಾಪಕರನ್ನು ಉಳಿಸುತ್ತಿರುವ ಶಿವಣ್ಣ ಅವರಿಗೆ ಅನಾರೋಗ್ಯ ಕಾಡುತ್ತಿದೆ. ಈಗಾಗಲೇ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿರುವ ಶಿವಣ್ಣ, ಸರ್ಜರಿಯೊಂದು ಬಾಕಿ ಇದೆ. ಅದಕ್ಕಾಗಿ ಅಮೆರಿಕಾಗೆ ತೆರಳುತ್ತಿದ್ದಾರೆ.

ಇಂದು ಅಮೆರಿಕಾಗೆ ತೆರಳುತ್ತಿರುವ ಶಿವಣ್ಣ ಡಿಸೆಂಬರ್ 25ಕ್ಕೆ ಸರ್ಜರಿಗೆ ಒಳಗಾಗುತ್ತಾರೆ. ಇಂದು ರಾತ್ರಿಯೇ ಅಮೆರಿಕಾಗೆ ಹೊರಡುವ ಸಾಧ್ಯತೆ ಇದೆ. ಹೀಗಾಗಿ ಶಿವಣ್ಣ ಅವರ ಸರ್ಜರಿ ಯಶಸ್ವಿಯಾಗಲಿ, ಶಿವಣ್ಣ ಆರೋಗ್ಯವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುವುದಕ್ಕೆ ಅವರ ಮನೆಗೆ ಆತ್ಮೀಯರು ಬಂದಿದ್ದಾರೆ. ಸುದೀಪ್, ಬಿಸಿ ಪಾಟೀಲ್, ವಿನೋದ್ ರಾಜ್, ಮಧು ಬಂಗಾರಪ್ಪ ಸೇರಿದಂತೆ ಇನ್ನು ಹಲವು ಆತ್ಮೀಯರು ಮನೆಗೆ ಬಂದು ಹೂ ಗುಚ್ಛ ನೀಡಿ ಹಾರೈಸಿದ್ದಾರೆ.

ಶಿವಣ್ಣ ಅನಾರೋಗ್ಯದ ಕಾರಣಕ್ಕೆ ಔಷಧ ತೆಗೆದುಕೊಳ್ಳುತ್ತಿದ್ದರು ಸಹ ಸಿನಿಮಾದ ಶೂಟಿಂಗ್ ಗೆಲ್ಲ ಹೋಗ್ತಾ ಇದ್ದರು. ಡಿಕೆಡಿ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ನಡೆಸಿಕೊಟ್ಟಿದ್ದಾರೆ. ಶಿವಣ್ಣ ಅವರಿಂದ ನಗುವೇ ಹೆಚ್ಚಾಗಿತ್ತು. ಡಿಕೆಡಿ ಫಿನಾಲೆಯ ಸಮಯದಲ್ಲಿ ಗೀತ ಶಿವರಾಜ್ ಕುಮಾರ್ ಅವರು ಇದನ್ನ ಹೇಳಿದ್ದರು. ಡಿಕೆಡಿ ಇಲ್ಲದೆ ಹೋಗಿದ್ದರೆ ಅವರನ್ನ ಸಂಭಾಳಿಸುವುದು ಕಷ್ಟವಾಗುತ್ತಾ ಇತ್ತು ಎಂದು. ವೇದಿಕೆ ಮೇಲೆ ಅನಾರೋಗ್ಯದ ಬಗ್ಗೆ ಹೇಳುತ್ತಿದ್ದಂತೆ ಶಿವಣ್ಣನಿಗೆ ದುಃಖ ತಡೆಯುವುದಕ್ಕೆ ಆಗಿರಲಿಲ್ಲ. ಕಣ್ಣೀರು ಹಾಕಿಬಿಟ್ಟರು. ವೇದಿಕೆಯಲ್ಲಿದ್ದ ಎಲ್ಲರು ಸಮಾಧಾನ ಮಾಡಿದರು‌. ಅಂದೇ ವೇದಿಕೆಯಲ್ಲಿ ಡಿಸೆಂಬರ್18 ಕ್ಕೆ ಶಸ್ತ್ರ ಚಿಕಿತ್ಸೆಗೆಂದು ಅಮೆರಿಕಾಗೆ ಹೋಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಗೀತಾ, ಶಿವಣ್ಣ ಜೊತೆಗೆ ಆತ್ಮೀಯರು ಕೂಡ ಅಮೆರಿಕಾಗೆ ತೆರಳುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *