ಬೆಂಗಳೂರು: ನಾಳೆಯಿಂದ ಕಾಂಗ್ರೆಸ್ ಸರ್ಕಾರದಿಂದ ಮೇಕೆದಾಟು ಪಾದಯಾತ್ರೆ ಆರಂಭವಾಗಲಿದೆ. ಸರ್ಕಾರ ಟಫ್ ರೂಲ್ಸ್ ಜಾರಿ ಮಾಡಿದ್ದರು ಕೂಡ ನಾವೂ ಪಾದಯಾತ್ರೆ ಮಾಡಿಯೇ ಮಾಡ್ತೀವಿ ಅಂತ ಹಠ ತೊಟ್ಟಿದ್ದಾರೆ. ಇನ್ನು ಈ ಪಾದಯಾತ್ರೆಗೆ ಕನ್ನಡ ಚಿತ್ರೋದ್ಯಮ ಕೂಡ ಸಂಪೂರ್ಣ ಬೆಂಬಲ ಘೋಷಿಸಿದೆ.
ಇನ್ನು ಕನ್ನಡ ಅಂತ ಬಂದಾಗ ನಾಡು, ನುಡಿ, ಜಲದ ವಿಚಾರದಲ್ಲಿ ಯಾವಾಗಲೂ ಮುಂದಿರುವ ಶಿವಣ್ಣ ಮೇಕೆದಾಟು ಯೋಜನೆಗೂ ಬೆಂಬಲ ಘೋಷಿಸಿದ್ದಾರೆ. ನಾಳೆ ನಡೆಯುವ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಈ ಹಿಂದೆಯೇ ಚಲನಚಿತ್ರ ವಾಣಿಜ್ಯ ಮಂಡಳಿ ಸಂಪೂರ್ಣ ಬೆಂಬಲ ಘೋಷಣೆ ಮಾಡಲಾಗಿತ್ತು. ಇದೊಂದು ಪಕ್ಷಾತೀತವಾದ ಹೋರಾಟ, ಹೀಗಾಗಿ ಎಲ್ಲರು ಭಾಗವಹಿಸಬೇಕು ಎಂಬ ನಿರ್ಧಾರ ಮಾಡಿದ್ದೇವೆ ಎಂದಿದ್ದಾರೆ.
ಚಿತ್ರರಂಗದ ಎಲ್ಲರು ಇದರಲ್ಲಿ ಸ್ವಯಂಪ್ರೇರಿತರಾಗಿ ಭಾಗವಹಿಸುತ್ತಿದ್ದೇವೆ. ಶಿವಣ್ಣ ಸೇರಿದಂತೆ ಹಂಸಲೇಖ ಅವರು ಕೂಡ ಇದರಲ್ಲಿ ಭಾಗಿಯಾಗಲಿದ್ದಾರೆ. ಡಿಕೆ ಶಿವಕುಮಾರ್ ಖುದ್ದಾಗಿ ಎಲ್ಲಾ ಚಿತ್ರರಂಗದ ನಟರನ್ನು ಭೇಟಿಯಾಗಿ ಮನವಿ ಮಾಡಿದ್ದರು ಎನ್ನಲಾಗಿದೆ.