ಅಪ್ಪು ನಿಧರಾಗಿ ತಿಂಗಳು ಕಳೆದಿದೆ. ದಿನ ಉರುಳುತ್ತಿದೆ. ಆದ್ರೆ ಅಪ್ಪು ಸಾವನ್ನಪ್ಪಿದ್ರು ಅನ್ನೋ ಸತ್ಯವನ್ನ ಯಾರಿಂದಲೂ ಈಗಲೂ ಒಪ್ಪಿಕೊಳ್ಳಲು ಆಗ್ತಿಲ್ಲ. ಅವ್ರ ಅಭಿಮಾನಿಗಳೆಲ್ಲಾ ಅವರ ಮುಂದಿನ ಸಿನಿಮಾಗಳ ಅಪ್ಡೇಟ್ ಗಾಗಿ ಕಾತೊರೆಯುತ್ತಿದ್ದರು. ನಮ್ಮ ಅಪ್ಪು ಮತ್ಯಾವ ಸಿನಿಮಾ ಮಾಡ್ತಾರೆ, ಮತ್ಯಾವ ರೀತಿಯ ಪಾತ್ರದಲ್ಲಿ ನಮ್ಮನ್ನ ರಂಜಿಸ್ತಾರೆ ಅಂತ. ಅವರ ಸಿನಿಮಾಗಳು ಬಂದ್ರೆ ಅವರ ಆಕ್ಟಿಂಗ್ ನೋಡೋಕೆ ಅದ್ಭುತ ಅನ್ನಿಸೋದು. ಆದ್ರೆ ಈಗ ಅವರ ಸಿನಿಮಾಗಳನ್ನ ನೋಡೋಕೆ ಆಗ್ತಾನೆ ಇಲ್ಲ. ಅವರ ಆ ನಗು ಮುಖ, ಆಕ್ಟಿಂಗ್, ಡಾನ್ಸ್ ಎಲ್ಲವೂ ಹೊಟ್ಟೆಯಲ್ಲಿ ತಳಮಳ ಹುಟ್ಟಿಸುತ್ತೆ. ನೋವು ಕಾಡುತ್ತೆ. ಕಣ್ಣೀರು ಜಿನುಗುತ್ತೆ.
ಆದ್ರೆ ಅವರಿಲ್ಲದ ಸತ್ಯವನ್ನ ಒಪ್ಪಿಕೊಂಡು ಅವರು ನಮಗಾಗಿ ಬಿಟ್ಟೊದದ್ದನ್ನಷ್ಟೇ ಖುಷಿಯಿಂದ ಸ್ವೀಕರಿಸಬೇಕಾಗಿದೆ. ಈ ದುಃಖದ ನಡುವೆ ಶಿವಣ್ಣ ಮತ್ತೊಮ್ಮೆ ಅವರ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಅಪ್ಪು ನಿಧನರಾದಾಗ ಸಾಕಷ್ಟು ಅಭಿಮಾನಿಗಳಯ ಆತ್ಮಹತ್ಯೆ ಮಾಡಿಕೊಂಡರು. ಸಾಇಷ್ಟು ಜನ ಹಾಸಿಗೆ ಹಿಡಿದರು. ಅದಕ್ಕೂ ಮುಂಚೆಯೇ ಯಾರು ದುಡಿಕಿ ನಿರ್ಧಾರ ತೆಗೆದುಕೊಳ್ಳಬೇಡಿ ಅಂತ ದೊಡ್ಮನೆಯವರು ಮನವಿಯನ್ನು ಮಾಡಿದ್ರು. ಆದ್ರೂ ಅಭಿಮಾನಿಗಳು ಕೇಳಿರಲಿಲ್ಲ. ಆದ್ರೆ ಇವತ್ತು ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಶಿವಣ್ಣ ಮತ್ತೊಮ್ಮೆ ಮನವಿ ಮಾಡಿದ್ದಾರೆ. ಯಾರು ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದರು.