ಅಪ್ಪು ಎಂದೆಂದಿಗೂ ಮರೆಯುವುದಕ್ಕೆ ಆಗದೆ ಇರುವಂತ ಜೀವವದು. ಜೊತೆಗಿರದ ಜೀವ ಎಂದಿಗೂ ಜೀವಂತ ಅನ್ನೋ ಮಾತಿದೆ. ಅದರಂತೆ ಅಪ್ಪು ದೈಹಿಕವಾಗಿ ಎಲ್ಲರನ್ನು ಅಗಲಿದ್ದರು ಸಹ, ಅವರ ನೆನಪು, ಅವರ ನಟನೆ, ಅವರ ಸಮಾಜಮುಖಿ ಕಾರ್ಯಗಳಿಂದ ಅಪ್ಪು ಅವರನ್ನು ಸದಾ ನೆನೆಯುತ್ತಾರೆ. ಇದೀಗ ಶಿವಣ್ಣ ಕೂಡ ಮಗುವೊಂದಕ್ಕೆ ಅಪ್ಪು ಹೆಸರಿಟ್ಟು, ಎಲ್ಲರ ಮೊಗದಲ್ಲೂ ಖುಷಿ ತಂದಿದ್ದಾರೆ.

ಶಿವಣ್ಣ ಅಂಡ್ ಟೀಂ ರಾಯಚೂರಿಗೆ ಭೇಟಿ ಕೊಟ್ಟಿದ್ದಾರೆ. ವೇದ ಸಿನಿಮಾದ ಪ್ರಿರಿಲೀಸ್ ಇವೆಂಟ್ ಇರುವ ಕಾರಣ ರಾಯಚೂರಿಗೆ ಭೇಟಿ ನೀಡಿದ್ದಾರೆ. ಕಾರ್ಯಕ್ರಮಕ್ಕೂ ಮುನ್ನ ಶಿವಣ್ಣ ಮತ್ತು ಗೀತಾ ಶಿವರಾಜ್ಕುಮಾರ್ ಅವರು ರಾಯರ ಮಠಕ್ಕೆ ಭೇಟಿ ನೀಡಿದ್ದರು. ರಾಯರ ದರ್ಶನ ಪಡೆದು, ಸಂತೃಪ್ತರಾದರು.

ಅಲ್ಲಿಂದ ಹೊರಟು ಕಾರ್ಯಕ್ರಮದ ಜಾಗಕ್ಕೆ ತೆರಳುವಾಗ ಅಭಿಮಾನಿಗಳು ಶಿವಣ್ಣನ ಬಳಿಗೆ ಬಂದರು. ಅಭಿಮಾನಿಯೊಬ್ಬರು ತಮ್ಮ ಮಗುವಿಗೆ ಹೆಸರಿಡಿ ಎಂದಾಗ ಮುದ್ದಾದ ಹೆಸರು, ಇಡೀ ಕರ್ನಾಟಕವೇ ಇಷ್ಟಪಡುವಂತ ಹೆಸರನ್ನು ಶಿವಣ್ಣ ಸೂಚಿಸಿದ್ದಾರೆ. ಅದುವೇ ಅಪ್ಪು. ಅಭಿಮಾನಿ ಸಹೋದರಿಯ ಮಗುವಿಗೆ ಅಪ್ಪು ಎಂದು ಹೆಸರಿಟ್ಟು, ಎಲ್ಲರ ಮನಸ್ಸನ್ನು ಖುಷಿಗೊಳಿಸಿದ್ದಾರೆ.


