ಶಿವಮೊಗ್ಗ ಮಾನವ ಸರಪಳಿ : ಹೊಸ‌ ಹುಮ್ಮಸ್ಸು ತುಂಬಿದ ನವದಂಪತಿ

suddionenews
1 Min Read

ಶಿವಮೊಗ್ಗ: ಇಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ. ಎಲ್ಲಾ ಕಡೆಯೂ ಈ ದಿನವನ್ನು ಮಾನವ ಸರಪಳಿ ನಿರ್ಮಿಸುವ ಮೂಲಕ ಆಚರಣೆ ಮಾಡಲಾಗಿತ್ತಿದೆ. ಶಿವಮೊಗ್ಗದಲ್ಲೂ ಮಾನವ ಸರಪಳಿಯನ್ನು ನಿರ್ಮಾಣ ಮಾಡಲಾಗಿದೆ. ರಾಜ್ಯಾದ್ಯಂತ ಸುಮಾರು 2,500 ಉದ್ಧದ ಮಾನವ ಸರಪಳಿ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ನವದಂಪತಿಯೂ ಭಾಗವಹಿಸಿದ್ದು, ಅದಾಗಲೇ ಸರಪಳಿ ನಿರ್ಮಿಸಿದ್ದವರಿಗೆ ಖುಷಿ ನೀಡಿದೆ.

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಕಾರೇಹಳ್ಳಿಯಿಂದ ಶಿವಮೊಗ್ಗ ತಾಲೂಕಿನ ಮಡಕೆ ಚೇಲೂರುವರೆಗೂ ಸರಪಳಿಯನ್ನು ನಿರ್ಮಾಣ ಮಾಡಲಾಗಿತ್ತು. ಸುಮಾರು 60 ಕಿಲೋ ಮೀಟರ್ ಮಾನವ ಸರಪಳಿ‌ ನಿರ್ಮಾಣ ಮಾಡಲಾಗಿತ್ತು. ಈ ಮಾನವ ಸರಪಳಿಯಲ್ಲಿ ಸರ್ಕಾರಿ ಶಾಲೆ ಮಕ್ಕಳು, ಖಾಸಗಿ ಶಾಲೆ ಮಕ್ಕಳು, ಸರ್ಕಾರಿ‌ ನೌಕರರು ಸೇರಿದಂತೆ ಆಸಕ್ತರೆಲ್ಲರೂ ಈ ಸರಪಳಿಯನ್ನು ನಿರ್ಮಿಸಿದ್ದರು.

ತುಮಕೂರು ಜಿಲ್ಲೆಯಲ್ಲೂ ಮಾನವ ಸರಪಳಿಯನ್ನು ನಿರ್ಮಾಣ ಮಾಡಲಾಗಿತ್ತು. ಸಚಿವ ಜಿ ಪರಮೇಶ್ವರ್ ತುಮಕೂರಿಗೆ ಭೇಟಿ ನೀಡ, ಅವರು ಕೂಡ ಮಾನವ ಸರಪಳಿಗೆ ಕೈ ಜೋಡಿಸಿದ್ದರು. ಬಳಿಕ ಮಾತನಾಡಿ, ಇಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನ. ನಮಗೆಲ್ಲಾ ಬದುಕುವ ಹಕ್ಕು ನೀಡಿರುವುದು ಪ್ರಜಾಪ್ರಭುತ್ವ. ಹೀಗಾಗಿ ಎಲ್ಲರೂ ಕೈಜೋಡಿಸಿದ್ದಾರೆ. ಹಾಗೆ ಇದು ವಿಶ್ವದಲ್ಲಿಯೇ ದಾಕಳೆ ಬರೆಯಲಿದೆ ಎಂದರು. ಎಲ್ಲೆಡೆ ಪ್ರಜಾಪ್ರಭುತ್ವದ ದಿನವನ್ನು ಅದ್ಭುತವಾಗಿ ಆಚರಣೆ ಮಾಡಲಾಗಿದೆ. ಮಾನವ ಸರಪಳಿಯನ್ನು ನಿರ್ಮಾಣ ಮಾಡುವ ಮೂಲಕ ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನವನ್ನು ಆಚರಣೆ ಮಾಡಲಾಗಿದೆ. ಸುಮಾರು 2,500 ಕಿಲೋ ಮೀಟರ್ ತನಕ ಈ ಸರಪಳಿಯನ್ನು ನಿರ್ಮಾಣ ಮಾಡಲಾಗಿತ್ತು. ಇದು ಜನರು ಮಾಡಿದ ದಾಖಲೆಯೆ ಸರಿ. ಎಲ್ಲರೂ ಮಾಮವ ಸರಪಳಿಯನ್ನು ನಿರ್ಮಿಸಿ ಸಂತಸ ಪಟ್ಟರು.

Share This Article
Leave a Comment

Leave a Reply

Your email address will not be published. Required fields are marked *