ಬೆಂಗಳೂರು: ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಹಾವಳಿ ಮಿತಿ ಮೀರಿದೆ. ಈ ಹಿನ್ನೆಲೆ ಬೆಂಗಳೂರಿನ ಸದಾಶಿವನಗರ ಶಿವಾಜಿ ಪುತ್ಥಳಿಗೆ ಕಪ್ಪು ಬಣ್ಣ ಬಳಿದಿದ್ದಾರೆ. ಈ ಪ್ರಕರಣ ಸಂಬಂಧ ಈಗಾಗಲೇ 7 ಜನರನ್ನ ಬಂಧಿಸಲಾಗಿದೆ.
ಈ ಸಂಬಂಧ ಮಾತನಾಡಿದ ಕೇಂದ್ರ ವಿಭಾಗ ಡಿಸಿಪಿ ಅನುಚೇತ್, 17 ರಂದು ಮುಂಜಾನೆ ಬಾಷ್ಯಂ ಸರ್ಕಲ್ ನಲ್ಲಿರುವ ಶಿವಾಜಿ ಪುತ್ಥಳಿಗೆ ಕಪ್ಪು ಬಣ್ಣ ಹಾಕಿದ್ರು. ಘಟನೆ ಸಂಬಂಧ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ವಿ. ಘಟನೆ ಸಂಬಂಧ ಏಳು ಜನರನ್ನು ಬಂಧಿಸಿದ್ದೇವೆ. ಅವರ ವಾಹನ ಹಾಗೂ ತಂದಿದ್ದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದೇವೆ.
ಇನ್ನೂ ಕೆಲವರು ಘಟನೆಯಲ್ಲಿ ಭಾಗಿಯಾಗಿದ್ದಾರೆ. ಅವರ ಬಗ್ಗೆಯೂ ಈಗಾಗಲೇ ಮಾಹಿತಿ ಸಿಕ್ಕಿದೆ. ನಾಪತ್ತೆಯಾಗಿರೋರ ಪತ್ತೆ ಕೆಲಸ ಕೂಡ ಮಾಡಲಾಗ್ತಿದೆ. ಒಟ್ಟು 13 ಜನರು ಇದ್ರಲ್ಲಿ ಭಾಗಿಯಾಗಿರೋದು ಗೊತ್ತಾಗಿದೆ. ಚೇತನ್ ಗೌಡ, ಗುರುದೇವ್ ನಾರಾಯಣ್ ಕುಮಾರ್ ಹಾಗೂ
ವರುಣ್ ಮೂವರು ಫ್ಲಾನ್ ಮಾಡಿದ್ರು.
ವರುಣ್ ಎಂಬಾತ ಶಿವಾಜಿ ಪುತ್ಥಳಿಗೆ ಮಸಿ ಬಳಿದಿದ್ದಾನೆ. ಈ ವೇಳೆ ದರ್ಶನ್ ಎಂಬಾತ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾನೆ. ನಂತರ ನವೀನ್ ಗೌಡ ಎಂಬಾತ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದಾನೆ. ಇದೆಲ್ಲಾ ಪ್ರಚಾರದ ದೃಷ್ಡಿಯಿಂದ ಮಾಡಿರೋ ಕೆಲಸ. ಹೀಗಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಲಾಗಿದೆ. ರಾತ್ರಿ ಸುಮಾರು 12:30 ರ ಸುಮಾರಿಗೆ ಘಟನೆ ನಡೆದಿರೋದು. ಮೊದಲೇ ಫ್ಲಾನ್ ಮಾಡಿಕೊಂಡು ಕೃತ್ಯ ಮಾಡಿರೋದು ತನಿಖೆ ವೇಳೆ ಬಯಲಾಗಿದೆ ಎಂದಿದ್ದಾರೆ.