
ಬೆಂಗಳೂರು: ಇತ್ತಿಚಿನ ದಿನಗಳಲ್ಲಿ ಹೃದಯಾಘಾತ ಎಂಬುದು ಕಾಮನ್ ಆಗಿ ಬಿಟ್ಟಿದೆ. ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದೀಗ ದಿಡೀರ್ ಹೃದಯಾಘಾತದಿಂದ ಸ್ವಾಮೀಜಿಯೊಬ್ಬರು ಲಿಂಗೈಕ್ಯರಾಗಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರೆನಹಳ್ಳಿಯ ವೀರಮಠದ ವೀರಮಹಾಂತ ಶಿವಚಾರ್ಯ ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ.

ಬೆಂಗಳೂರು ನಗರದ ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್ ನಲ್ಲಿ ಈ ಘಟನೆ ನಡೆದಿದೆ. ಸ್ವಾಮೀಜಿಗೆ ಹೃದಯಾಘಾತವಾದ ತಕ್ಷಣ ಅಲ್ಲಿಯೇ ಇದ್ದ ಭಕ್ತರು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ನಿಧನರಾಗಿದ್ದಾರೆ. ಸ್ವಾಮೀಜಿ ಬೆಂಗಳೂರಿನಿಂದ ಸ್ವಾಮೀಜಿ ಯಾದಗಿರಿಗೆ ಹೋಗುವುದಕ್ಕಾಗಿಯೇ ರೈಲ್ವೇ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ದುರ್ಘಟನೆ ನಡೆದಿದೆ.
ಮುಂದಿನ ತಿಂಗಳು ತಮ್ಮ 25ನೇ ಪಟ್ಟಾಧಿಕಾರಿ ಮಹೋತ್ಸವ ಆಯೋಜನೆ ಮಾಡಿದ್ದರು. ಈ ಕಾರ್ಯಕ್ರಮಕ್ಕೆ ಗಣ್ಯರನ್ನು ಆಹ್ವಾನ ಮಾಡುವುದಕ್ಕೆಂದೆ ಬೆಂಗಳೂರಿಗೆ ಬಂದಿದ್ದರು. ಆಗಲೇ ಬಿ ವೈ ವಿಜಯೇಂದ್ರ ಸೇರಿದಂತೆ ಹಲವರನ್ನು ಆಹ್ವಾನ ಮಾಡಿ ವಾಪಾಸ್ ಹೊರಟಿದ್ದರು. ಆಗ ಈ ದುರ್ಘಟನೆ ನಡೆದಿದೆ.

GIPHY App Key not set. Please check settings