ಬೆಳಗಾವಿ : ಯಾರಿಗೆ ಆಗಲಿ ಅವರವರ ರಾಜ್ಯ, ಅವರವರ ಭಾಷೆ ಮೇಲೆ ಅಭಿಮಾನ, ಪ್ರೀತಿ, ಗೌರವ ಇದ್ದೆ ಇರುತ್ತೆ, ಇರಲೇಬೇಕು ಕೂಡ. ಆ ಭಾಷೆಗೆ, ಆ ನೆಲಕ್ಕೆ ಅವಮಾನವಾದರೇ ಅಲ್ಲಿನವರ ಕೋಪ ಹೆಚ್ಚಾಗಿತ್ತೆ, ಮನಸ್ಸಿಗೆ ನೋವಾಗುತ್ತೆ. ಮಹಾರಾಷ್ಟ್ರದಲ್ಲಿರುವ ಶಿವಸೇನೆಯ ಪುಂಡರು ಪದೇ ಪದೇ ಈ ವಿಚಾರದಲ್ಲಿ ಕನ್ನಡಿಗರನ್ನ ಕೆಣಕುತ್ತಲೆ ಇದ್ದಾರೆ.
ಇತ್ತೀಚೆಗಷ್ಟೇ ನಮ್ಮ ಕನ್ನಡದ ಧ್ವಜವನ್ನ ಸುಟ್ಟು ಹಾಕಿದ್ರು. ಅಲ್ಲಿಂದ ಇಲ್ಲಿಯವರೆಗೂ ಕನ್ನಡಿಗರ ಮೇಲೆ ಅಟ್ಟಹಾಸ ಮೆರೆಯುತ್ತಲೆ ಇದ್ದಾರೆ. ಇದೀಗ ಯಾವ ಭಯವೂ ಇಲ್ಲದೆ ಮತ್ತೆ ಕನ್ನಡ ಧ್ವಜದ ವಿಚಾರಕ್ಕೆ ಬಂದಿದ್ದಾರೆ. ಕನ್ನಡದ ಧ್ವಜವನ್ನ ಸುಟ್ಟಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೀರಜ್ ನ ಮಹಾರಾಣಾ ಪ್ರತಾಪ್ ಚೌಕ್ ನಲ್ಲಿ ಈ ರೀತಿ ಪುಂಡಾಟ ಮೆರೆದಿದ್ದಾರೆ. ಕನ್ನಡ ಧ್ವಜ ಸುಟ್ಟು, ಕರ್ನಾಟಕ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ಅಷ್ಟೇ ಅಲ್ಲ ಶಿವಸೇನೆಯ ಚಂದ್ರಕಾಂತ ಮೈನಗುರೆ ಎಂಬಾತ ಮಹಾರಾಷ್ಟ್ರ ಗಡಿಗೆ ನುಗ್ಗಿ ಪ್ರತಿಭಟನೆ ನಡೆಸುತ್ತೇನೆ ಎಂದಿದ್ದಾರೆ.