ಒಂದೂವರೆ ಕೋಟಿ ವಂಚನೆಗೆ ಬಿಗ್ ಟ್ವಿಸ್ಟ್ : ಶಿಲ್ಪಾ ಶೆಟ್ಟಿ ಹೇಳಿದ್ದೇನು..?

ಶಿಲ್ಪಾ ಶೆಟ್ಟಿ ಹೇಳಿ ಕೇಳಿ ಫಿಟ್ನೆಸ್ ಗುರು. ಹೀಗಾಗಿ ಬೇರೆ ಬೇರೆ ನಗರದಲ್ಲಿ ಫಿಟ್​​ನೆಸ್​ ಕೇಂದ್ರ ಆರಂಭಿಸಲು ಆಸಕ್ತಿ ತೋರಿಸಿದ್ದರು ಎನ್ನಲಾಗಿತ್ತು. ಅದಕ್ಕಾಗಿ ಕೆಲವು ಉದ್ಯಮಿಗಳಿಂದ 1.5 ಕೋಟಿ ರೂ. ಹಣ ಪಡೆದು, ಫಿಟ್ನೆಸ್​ ಕೇಂದ್ರವನ್ನೂ ಆರಂಭಿಸಿಲ್ಲ, ಹಣವನ್ನೂ ವಾಪಸ್​ ನೀಡಿಲ್ಲ ಎಂಬ ಆರೋಪ ಇತ್ತು. ಈ ಸಂಬಂಧ ಶಿಲ್ಪಾ ಶೆಟ್ಟಿ ಮತ್ತು ರಾಜ್​ ಕುಂದ್ರಾ ವಿರುದ್ಧ ಕೇಸ್​ ದಾಖಲಿಸಿದ್ದಾರೆ. ಆದರೆ ಇದರ ಅಸಲಿಯತ್ತನ್ನು ನಟಿ ತೆರೆದಿಟ್ಟಿದ್ದಾರೆ.

ಒಂದೂವರೆ ಕೋಟಿ ವಂಚನೆಯ ಪ್ರಕರಣ ಮತ್ತೆ ಶಿಲ್ಪಾ ಶೆಟ್ಟಿ ತಲೆ ಕೆಡಿಸಿತ್ತು. ಇದೀಗ ಆ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಶಿಲ್ಪಾ ಶೆಟ್ಟಿ ಅವರದ್ದು ಎನ್ನಲಾದ SFL ಫಿಟ್​ನೆಸ್​ ಕೇಂದ್ರಕ್ಕೂ ಶಿಲ್ಪಾಗೂ ಸಂಬಂಧವೇ ಇಲ್ಲವಂತೆ. ‘SFL ಫಿಟ್ನೆಸ್ ಇದು ಕಾಶಿಫ್ ಖಾನ್ ನಡೆಸುತ್ತಿರುವ ಉದ್ಯಮ. ಅವರು ದೇಶಾದ್ಯಂತ SFL ಫಿಟ್‌ನೆಸ್ ಜಿಮ್‌ಗಳನ್ನು ತೆರೆಯಲು SFL ಬ್ರಾಂಡ್‌ನ ಹಕ್ಕುಗಳನ್ನು ತೆಗೆದುಕೊಂಡಿದ್ದರು. ಎಲ್ಲಾ ವ್ಯವಹಾರಗಳು ಅವರಿಂದ ನಡೆಯುತ್ತಿವೆ. ಅವರ ಯಾವುದೇ ವಹಿವಾಟಿನ ಬಗ್ಗೆ ನಮಗೆ ತಿಳಿದಿಲ್ಲ ಎಂದಿದ್ದಾರೆ.

ಇನ್ನು ಎಲ್ಲಾ ಫ್ರಾಂಚೈಸಿಗಳ ವ್ಯವಹಾರವನ್ನು ಕಾಶಿಫ್ ನೋಡಿಕೊಳ್ಳುತ್ತಿದ್ದಾರೆ. ಕಂಪನಿಯು 2014 ರಲ್ಲಿ ಮುಚ್ಚಿದೆ. ಈಗ ಅದರ ಸಂಪೂರ್ಣ ಜವಾಬ್ದಾರಿ ಕಾಶಿಫ್ ಖಾನ್ ನಿರ್ವಹಿಸುತ್ತಿದ್ದಾರೆ. ಕಳೆದ 28 ವರ್ಷಗಳಿಂದ ನಾನು ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದೇನೆ. ಈಗ ನನ್ನ ಹೆಸರು ಮತ್ತು ಖ್ಯಾತಿಗೆ ಹಾನಿಯಾಗುತ್ತಿದೆ ಎಂದು ಆರೋಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *