ಇತ್ತೀಚಿನ ದಿನಗಳಲ್ಲಿ ವಿಚ್ಛೇದನದ ಪ್ರಕರಣಗಳು ಅದ್ಯಾಕೋ ಏನೋ ಸಿಕ್ಕಾಪಟ್ಟೆ ಜಾಸ್ತಿಯಾಗುತ್ತಿವೆ. ಇದೀಗ ಟೀಂ ಇಂಡಿಯಾ ಆಟಗಾರ ಶಿಖರ್ ಧವನ್ ಕೂಡ ಪತ್ನಿಯೊಂದಿಗೆ ತಮ್ಮ ಸಾಂಸಾರಿಕ ಜೀವನಕ್ಕೆ ಅಂತ್ಯವಾಡಿದ್ದಾರೆ. ಹನ್ನೊಂದು ವರ್ಷಗಳ ದಾಂಪತ್ಯ ಜೀವನಕ್ಕೆ ಶಿಖರ್ ಧವನ್ ಹಾಗೂ ಆಯಿಷಾ ಮುಖರ್ಜಿ ಡಿವೋರ್ಸ್ ಎಂಬ ಮುದ್ರೆ ಒತ್ತಿದ್ದಾರೆ.
ಶಿಖರ್ ಧವನ್, ತನ್ನ ಪತ್ನಿಯಿಂದ ಮಾನಸಿಕವಾಗಿ ನೊಂದಿದ್ದೇನೆ ಎಂದು ಕೋರ್ಟ್ ಮೆಟ್ಟಿಲೇರಿದ್ದರು. ನನಗೆ ಡಿವೋರ್ಸ್ ಬೇಕೆಂದು ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಅವರ ಪತ್ನಿಯ ವಿರುದ್ಧ ನಮೂದಾಗಿದ್ದ ಆರೋಪಗಳನ್ನೆಲ್ಲಾ ನ್ಯಾಯಾಧೀಶರು ಪರಿಶೀಲನೆ ಮಾಡಿದ್ದಿ, ಇಬ್ಬರು ಪ್ರತ್ಯೇಕವಾಗಿ ಜೀವಿಸಲು ಕೋರ್ಟ್ ಅನುಮತಿ ನೀಡಿದೆ. ಪಟಿಯಾಲದ ಹೌಸ್ ಕಾಂಪ್ಲೆಕ್ಸ್ ನಲ್ಲಿರುವ ಕೌಟುಂಬಿಕ ನ್ಯಾಯಾಲಯವು ಇಬ್ಬರಿಗೂ ವಿಚ್ಚೇದನ ನೀಡಿದೆ. ಜೊತೆಗೆ ಧವನ್ ಹಾಗೂ ಮಕ್ಕಳ ಭೇಟಿಗೂ ಅವಕಾಶ ನೀಡಿದೆ. ಆಯಿಷಾ ಆಸ್ಟ್ರೇಲಿಯಾದಲ್ಲಿ ವಾಸ ಮಾಡಲಿದ್ದಾರೆ. ವಿಡಿಯೋ ಕಾಲ್, ನೇರ ಭೇಟಿಗೂ ಕೋರ್ಟ್ ಅವಕಾಶ ನೀಡಿದೆ.
ಇನ್ನು ಶಿಖರ್ ಧವನ್, 2012ರಲ್ಲಿ ಆಯಿಷಾ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸುಖ ಸಂಸಾರದಲ್ಲಿ ಈ ನಡುವೆ ಬಿರುಕು ಮೂಡಿತ್ತು. ಆಯಿಷಾ ಈ ಬಗ್ಗೆ 2021ರಲ್ಲಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ವಿಚ್ಛೇದನ ಪಡೆಯುತ್ತಿರುವ ಬಗ್ಗೆ ಹೇಳಿಕೊಂಡಿದ್ದರು. ಇದೀಗ ಇಬ್ಬರ ದಾಂಪತ್ಯ ಜೀವನಕ್ಕೆ ಕೋರ್ಟ್ ಫುಲ್ ಸ್ಟಾಪ್ ಇಟ್ಟಿದೆ.