ಶಿಡ್ಲಘಟ್ಟ ಕೇಸ್ : ರಕ್ಷಣೆ ಕೋರಿ ಪೊಲೀಸ್ ಠಾಣೆ‌ಮೆಟ್ಟಿಲೇರಿದ ಪೌರಾಯುಕ್ತೆ..!

1 Min Read

ಚಿಕ್ಕಬಳ್ಳಾಪುರ: ಪೌರಾಯುಕ್ತೆ ಅಮೃತಾ ಈಗ ಜೀವ ರಕ್ಷಣೆಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕಾಂಗ್ರೆಸ್ ನಾಯಕ ರಾಜೀವ್ ಗೌಡ ಜೊತೆಗೆ ಬ್ಯಾನರ್ ವಿಚಾರಕ್ಕೆ ಗಲಾಟೆ ನಡೆದಿತ್ತು. ಆ ಕೇಸ್ ಗೆ ಸಂಬಂಧಿಸಿದಂತೆ ಸಾಕಷ್ಟು ಅಪ್ಡೇಟ್ ಆಗ್ತಾನೆ ಇದೆ. ಈಗಾಗಲೇ ಕೆಪಿಸಿಸಿಯಿಂದಾನೂ ರಾಜೀವ್ ಗೌಡರನ್ನ ಅಮಾನತು ಮಾಡಲಾಗಿದೆ. ಇದರ ಮಧ್ಯೆ ಅಮೃತಾ ಅವರಿಗೆ ಬೆದರಿಕೆ ಬಂದಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಪೌರಾಯುಕ್ತೆ ಅಮೃತಾಗೆ ಆ್ಯಸಿಡ್ ಹಾಕುವುದಾಗಿ ಬೆದರಿಕೆ ಹಾಕಲಾಗಿದೆಯಂತೆ. ಹೀಗಾಗಿ ಪೊಲೀಸರಿಗೆ ಅಮೃತಾ ಪತ್ರದ ಮೂಲಕ ರಕ್ಷಣೆ ಕೋರಿದ್ದಾರೆ. ಸದ್ಯ ಜೀವ ಭಯದಲ್ಲಿಯೇ ಅಮೃತಾ ತನ್ನ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಅತ್ತ ರಾಜೀವ್ ಗೌಡ ಪರ ವಕೀಲರು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲಾ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿಯೂ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿಯ ಎರಡನೇ ವಿಚಾರಣೆ ಇಂದು ನಡೆದಿದೆ. ಸರ್ಕಾರಿ ಅಭಿಯೋಜಕರು ಸಲ್ಲಿಸಿದ್ದ ಆಕ್ಷೇಪಣೆಗಳಿಗೆ ರಾಜೀವ್ ಗೌಡ ಪರ ವಕೀಲ ವಿವೇಕ್ ಸುಬ್ಬಾ ರೆಡ್ಡಿ ವಾದ ಮಂಡನೆ ಮಾಡಿದ್ದರು. ನ್ಯಾಯಾಲಯ ವಾದ – ಪ್ರತಿವಾದ ಆಲಿಸಿದ್ದು, ಜನವರಿ 24ಕ್ಕೆ ಆದೇಶ ಕಾಯ್ದಿರಿಸಿದೆ. ರಾಜೀವ್ ಗೌಡಗೆ ನಿರೀಕ್ಷಣಾ ಜಾಮೀನು ಸಿಗುತ್ವಾ ಇಲ್ವಾ ಎಂಬುದು ನಾಳೆ ಗೊತ್ತಾಗಲಿದೆ. ರಾಜೀವ್ ಗೌಡ ಅವರ ಆಡಿಯೋ ಕೇಳಿ ಕಾಂಗ್ರೆಸ್ ನಾಯಕರೇ ಶಾಕ್ ಆಗಿದ್ದರು. ಅದರಲ್ಲೂ ರಾಜೀವ್ ಗೌಡ ಅವರನ್ನು ಹತ್ತಿರದಿಂದ ಕಂಡಂತವರು ಕೂಡ ಶಾಕ್ ಆಗಿದ್ದರು. ಅವರು ಮಾಡಿದ ತಪ್ಪಿಗೆ ಈಗಾಗಲೇ ಎಫ್ಐಆರ್ ದಾಖಲಾಗಿದೆ, ಕೆಪಿಸಿಸಿಯಿಂದ ಅಮಾನತು ಕೂಡ ಆಗಿದ್ದಾರೆ.

Share This Article