ಡಿಕೆ ಶಿವಕುಮಾರ್ ಧರಿಸಿರುವ ಶಾಲು 59 ಸಾವಿರ : ಬಿಜೆಪಿಯಿಂದ ವ್ಯಂಗ್ಯ..!

1 Min Read

 

ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ ಪೆಟ್ರೋಲ್-ಡಿಸೇಲ್ ದರ ಏರಿಕೆಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ತೈಲ ಬೆಲೆಯನ್ನು ಕಡಿಮೆ ಮಾಡಬೇಕೆಂದು ಆಗ್ರಹಿಸಿ ಬಿಜೆಪಿ ಈಗಾಗಲೇ ಬೃಹತ್ ಪ್ರತಿಭಟನೆಯನ್ನು ಮಾಡಿದೆ. ಇದೀಗ ಕಾಂಗ್ರೆಸ್ ನಾಯಕರ ಮೇಲೆ ಬಿಜೆಪಿ ಮತ್ತೆ ಚಾಟಿ ಬೀಸಿದೆ. ಡಿಸಿಎಂ ಡಿಕೆ ಶಿವಕುಮಾರ್ ಧರಿಸಿರುವ ಶಾಲಿನ ಮೇಲೆ ಕಣ್ಣು ಹಾಕಿದೆ. ಶಾಲಿನ ಫೋಟೋ ಜೊತೆಗೆ ಅದರ ಬೆಲೆ ಎಷ್ಟು ಎಂಬುದನ್ನು ಹಾಕಿದ್ದಾರೆ.

ಬಿಜೆಪಿ ನಾಯಕರು ಸಾಕ್ಷಿ ಸಮೇತ ಹಾಕಿರುವ ಪ್ರಕಾರ ಡಿಸಿಎಂ ಡಿಕೆ ಶಿವಕುಮಾರ್ ಹಾಕಿರುವ ಶಾಲಿನ ಬೆಲೆ 59,500 ರೂಪಾಯಿ ಆಗಿದೆ. ಈ ಸಂಬಂಧ ಬಿಜೆಪಿ ಟ್ವೀಟ್ ಮಾಡಿರುವುದು ಹೀಗೆ, ‘ಕುರುಡು ಕಾಂಚಾಣ ಕುಣಿಯುತ್ತದೆ ಎಂಬುದಕ್ಕೆ ಡಿಸಿಎಂ @DKShivakumar ಅವರು ನಡೆಸುತ್ತಿರುವ ಅಂಧಾ ದರ್ಬಾರ್ ಸಾಕ್ಷಿ. ನಮ್ಮ ಕಾಸ್ಟ್ಲಿ ಕುಮಾರ್ ಅವರು ಧರಿಸಿರುವ ಶಾಲಿನ ಬೆಲೆ ಬರೋಬ್ಬರಿ ₹59,500!!! ಬೆಲೆಯೇರಿಕೆಯಿಂದ ಜನ ಒಂದ್ಹೊತ್ತಿನ ಊಟಕ್ಕೂ ತತ್ವಾರ ಅನುಭವಿಸುತ್ತಿದ್ದಾರೆ, ಆದರೆ ಜನಪ್ರತಿನಿಧಿಗಳು ಮಾತ್ರ ಜನರ ತೆರಿಗೆ ದುಡ್ಡಿನಲ್ಲಿ ಶೋಕಿ ಮಾಡುತ್ತಿರುವುದು ನಿಜಕ್ಕೂ ದುರಂತ ಎಂದು ಟ್ವೀಟ್ ಮಾಡಿದ್ದಾರೆ.

ರಾಜಕಾರಣದಲ್ಲಿ ವಿರೋಧ ಪಕ್ಷಗಳು ಸಣ್ಣ ಸಣ್ಣ ತಪ್ಪುಗಳನ್ನು ಹುಡುಕಿ, ಅದರ ಬಗ್ಗೆ ಮಾತನಾಡುವುದು ಅವರ ಕೆಲಸವಾಗಿದೆ. ಆದರೆ ರಾಜ್ಯದಲ್ಲಿ ಜನ ಎಷ್ಡೋ ಸಮಸ್ಯೆಗಳಿಂದ ನರಳುತ್ತಾರೆ. ಯಾವುದೇ ರಾಜಕೀಯ ಪಕ್ಷ ಆಡಳಿತಕ್ಕೆ ಬಂದರೂ ಅಭಿವೃದ್ದಿ, ಜನರ ಸಮಸ್ಯೆ ಬಗೆ ಹರಿಯುವುದು ಬಹಳ ಕಷ್ಟ. ಬೆಲೆ ಏರಿಕೆಯಾಗಲಿ, ಪ್ರವಾಹ ಬಂದು ಬೆಳೆ ನಷ್ಡವಾಗಲಿ ನಾವೇ ಅನುಭವಿಸಬೇಕು. ರಾಜಕಾರಣಿಗಳು ಅವರ ಅದ್ದೂರಿ ಜೀವನ ನಡೆಸುವುದೇನು ಕಡಿಮೆ ಆಗಲ್ಲ ಅನ್ನೋದು ಮಧ್ಯಮ ವರ್ಗದ ಜನರ ಬೇಸರದ ನುಡಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *