ನವದೆಹಲಿ: ದೇಶದಲ್ಲಿ ತಿಂಗಳಿನಿಂದ ನಾನಾ ವಿಚಾರಗಳು ದೇಶದಲ್ಲಿ ಗೊಂದಲ ಸೃಷ್ಟಿಸಿವೆ. ಪ್ರಸ್ತುತ ನೂಪೂರ್ ಶರ್ಮಾ ನೀಡಿದ ಆ ಒಂದು ಹೇಳಿಕೆ ದೇಶದಲ್ಲಿ ಗದ್ದಲ ಎಬ್ಬಿಸಿದೆ. ಈ ಎಲ್ಲದರ ಬಗ್ಗೆ ಮಾತನಾಡಿದ ಕಾಂಗ್ರೆಸ್ ಸಂಸದ ಶಶಿ ತರೂರ್ ಬೇಸರ ಹೊರ ಹಾಕಿದ್ದಾರೆ. ಪ್ರಧಾನಿ ಮೋದಿ ಯಾಕೆ ಮೌನವಹಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ದೇಶದಲ್ಲಿ ದ್ವೇಷದ ಭಾವನೆ ಭಿತ್ತಲಾಗುತ್ತಿದೆ. ದಂಗೆ ಆರಂಭವಾಗಿದೆ. ನೂಪೂರ್ ಶರ್ಮಾ ನೀಡಿದ ಹೇಳಿಕೆಯಿಂದಾಗಿ ಮುಸ್ಲಿಂ ಸಮುದಾಯ ಪ್ರತಿಭಟನೆ ಆರಂಭಿಸಿದ್ದಾರೆ.ದೇಶದ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ವಿಕೋಪಕ್ಕೆ ತಿರುಗಿದೆ. ದಂಗೆ ಎದ್ದಿದ್ದಾರೆ. ಇದರಿಂದಾಗಿ ಭಾರತ ಮತ್ತು ಮುಸ್ಲಿಂ ರಾಷ್ಟ್ರಗಳ ನಡುವೆ ಬೆಸೆದಿದ್ದ ಸಂಬಂಧಕ್ಕೆ ಹೊಡೆತ ಬಿದ್ದಿದೆ.
ಇಂಥಹ ಘಟನೆಗಳಿಂದ ದೇಶದ ಪ್ರಗತಿಗೆ ಹೊಡೆತ ಬೀಳುತ್ತದೆ. ದೇಶದಲ್ಲಿ ಆಗುತ್ತಿರುವ ಅನಾಹುತಗಳ ಬಗ್ಗೆ ಮೋದಿ ಗಮನಹರಿಸಿರುತ್ತಾರೆ. ಈ ಕೂಡಲೇ ಅವರು ಸಾರ್ವಜನಿಕವಾಗಿ ಮಾತನಾಡುವ ಅಗತ್ಯತೆ ಇದೆ. ಮೌನ ಬಿಟ್ಟು ಮಾತನಾಡಿದರೆ ಸಮಸ್ಯೆಗೊಂದು ಪರಿಹಾರ ಸಿಗಬಹುದು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.