ಹೈದ್ರಬಾದ್: ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಹೋದರಿ ವೈ ಎಸ್ ಶರ್ಮಿಳಾ ಅವರನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ವಾರಂಗಲ್ ಜಿಲ್ಲೆಯಲ್ಲಿ YSRTP ಹಾಗೂ TRS ಪಕ್ಷದ ಬೆಂಬಲಿಗರು & ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಇದರ ಪರಿಣಾಮ ಶರ್ಮಿಳಾ ಅವರನ್ನು ಬಂಧಿಸಲಾಗಿದೆ.
YSRTP ಪಕ್ಷದಿಂದ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಪಾದಯಾತ್ರೆಯಲ್ಲಿ ಶರ್ಮಿಳಾ ಭಾಗವಹಿಸಿದ್ದರು. ಭಾನುವಾರ ನರಸಂಪೇಟೆಯಲ್ಲಿ ಪಾದಯಾತ್ರೆ ನಡೆಸಿದ್ದರು. ಪಾದಯಾತ್ರೆ ಮಾಡುವ ವೇಲೆ YSRTP ಪಕ್ಷದ ಶಾಸಕ ಪೆದ್ದಿ ಸುದರ್ಶನ್ ರೆಡ್ಡಿ ಅವರನ್ನು ಟೀಕಿಸಿದ್ದರು. ಇದಕ್ಕೆ ಟಿಆರ್ಎಸ್ ಪಕ್ಷದವರು ರೊಚ್ಚಿಗೆದ್ದಿದ್ದರು. ಇದರ ಪರಿಣಾಮ ಮುಖಾ ಮುಖಿಯಾದ YSRTP ಹಾಗೂ TRS ಪಕ್ಷದ ಬೆಂಬಲಿಗರು & ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ.
ಈ ವೇಳೆ ಪೊಲೀಸರು ಶರ್ಮಿಳಾ ಅವರನ್ನು ವಶಕ್ಕೆ ಪಡೆದಿದ್ದಾರೆ. ನೀವೂ ನನ್ನನ್ನು ಯಾಕೆ ಬಂಧಿಸುತ್ತಿದ್ದೀರಿ. ನಾನಿಲ್ಲಿ ಬಲಿಪಶುನಾ. ಇಲ್ಲಿ ನಾನು ಆರೋಪಿಯಲ್ಲ ಎಂದಿದ್ದಾರೆ. ಶರ್ಮಿಳಾ ಅವರ ಪಾದಯಾತ್ರೆಯ ಜೊತೆಗಿದ್ದ ವಾಹನಗಳಿಗೂ ಬೆಂಕಿ ಹಚ್ಚಿದ್ದಾರೆ. ಇದು YSRTP ಬೆಂಬಲಿಗರನ್ನು ಮತ್ತಷ್ಟು ಕೆರಳಿಸಿತ್ತು.