ಸ್ಯಾಂಡಲ್ವುಡ್ ಹಿರಿಯ ನಟ ಲೋಹಿತಾಶ್ವ ಅನಾರೋಗ್ಯ ಕಾರಣದಿಂದ ನಿನ್ನೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಲ್ಲಿರುವ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇಂದು ತುಮಕೂರಿನ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಆದ್ರೆ ಲೋಹಿತಾಶ್ವ ಅವರಿಗೆ ಯಾವ ರೀತಿಯ ಅನಾರೋಗ್ಯ ಕಾಡಿತ್ತು..? ಏನಾಗಿತ್ತು ಎಂಬುದನ್ನು ಅವರ ಮಗ ಶರತ್ ಲೋಹಿತಾಶ್ವ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಶರತ್ ಲೋಹಿತಾಶ್ವ, ಅವರಿಗೆ ಒಮ್ಮೆ ಹೃದಯಾಘಾತ ಸಂಭವಿಸಿತ್ತು. ಹೀಗಾಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಬಳಿಕ ಆಸ್ಪತ್ರೆಯಲ್ಲಿ ತಂದೆಯವರಿಗೆ ಸಿಪಿಆರ್ ಮಾಡಿ ಎದೆ ಬಡಿತವನ್ನು ಪುನರಾರಂಭ ಮಾಡಿದ್ದರು. ಈ ಚಿಕಿತ್ಸೆಯನ್ನೇ ಹೆಚ್ಚಿನ ಸಮಯ ತೆಗೆದುಕೊಂಡ ಕಾರಣ ಮೆದುಳಿಗೆ ತಲುಪಬೇಕಿದ್ದ ಆಕ್ಸಿಜನ್ ಪೂರೈಕೆಯಲ್ಲಿ ಕಡಿಮೆಯಾಗಿತ್ತು. ಎಂಆರ್ಐ ಮಾಡಿಸಿದಾಗ ಮೆದುಳಿಗೆ ತಲುಪಬೇಕಿದ್ದ ಆಕ್ಸಿಜನ್ ಪೂರೈಕೆ ಆಗುತ್ತಾ ಇರಲಿಲ್ಲ. ಹೀಗಾಗಿ ಶೇಕಡ 95 ರಷ್ಟು ಮೆದುಳು ನಿಷ್ಟ್ರೀಯವಾಗಿಬಿಟ್ಟಿತ್ತು.
ಬಳಿಕ ಅವರೇ ಚೇತರಿಸಿಕೊಂಡಿದ್ದರು. ಬಿಪಿ ಎಲ್ಲಾ ನಾರ್ಮಲ್ ಆಗಿತ್ತು. ಅವರೇ ಆಖ್ಸಿಜನ್ ಉತ್ಪತ್ತಿ ಮಾಡುವಷ್ಟು ಎನರ್ಜಿ ತೆಗೆದುಕೊಳ್ಳುತ್ತಿದ್ದರು. ಆದ್ರೆ ಕಾಲಕ್ರಮೇಣ ಅವರ ಕಿಡ್ನಿ, ಹಾರ್ಟ್ ಎಲ್ಲವೂ ಡ್ಯಾಮೇಜ್ ಆಗುತ್ತಾ ಬಂತು. ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಹೋದರು ಪ್ರಯೋಜನವಿಲ್ಲ ಎಂದು ಗೊತ್ತಾಗಿತ್ತು. ಈಗ ಈ ರೀತಿ ನೋಡಬೇಕಾಗಿದೆ ಎಂದು ಶರತ್ ಲೋಹಿತಾಶ್ವ ನೊಂದುಕೊಂಡಿದ್ದಾರೆ.