ಶ್ರೀ ಸದ್ಗುರು ಕಬೀರಾನಂದಸ್ವಾಮಿ ಆಶ್ರಮದಲ್ಲಿ  ಅಕ್ಟೋಬರ್ 15 ರಿಂದ 24ರವರಗೆ ಶರನ್ನವರಾತ್ರಿ ಕಾರ್ಯಕ್ರಮ

1 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, (ಅಕ್ಟೋಬರ್. 11) : ನಗರದ ಕಬೀರಾನಂದ ನಗರದ ಶ್ರೀ ಸದ್ಗುರು ಕಬೀರಾನಂದಸ್ವಾಮಿ ಆಶ್ರಮದಲ್ಲಿ ಶ್ರೀ ಭಗವತಿ ಬಗಳಾಂಬಿಕಾದೇವಿ ಆವರಣದಲ್ಲಿ  ಅಕ್ಟೋಬರ್ 15 ರಿಂದ 24ರವರಗೆ ಶರನ್ನವರಾತ್ರಿ ಕಾರ್ಯಕ್ರಮ ವಿಜಯದಶಮಿಯವರೆಗೆ ಶ್ರೀ ದೇವಿ ಪುರಾಣ ನಡೆಯಲಿದೆ ಎಂದು ಆಶ್ರಮದ ಗಣಪತಿ ಶಾಸ್ತ್ರಿ ತಿಳಿಸಿದ್ದಾರೆ.

ಶ್ರೀ ಮಠದ ಪೀಠಾಧ್ಯಕ್ಷರಾದ ಸದ್ಗುರು ಶ್ರೀ ಶಿವಲಿಂಗಾನಂದ ಶ್ರೀಗಳು ಸಾನಿದ್ಯದಲ್ಲಿ ಅ.15 ರಿಂದ 24ರವರೆಗೆ ಪ್ರತಿ ದಿನ ಸಂಜೆ 7 ರಿಂದ 9ವರೆಗೆ ಗೊಲ್ಲರಹಟ್ಟಿಯ ಶಿ.ಈರಣ್ಣ ಮಲ್ಲಾಪುರ ಇವರು ಚರಿತ್ರೆಯನ್ನು ಪಠಿಸಲಿದ್ದು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಹುರಳಿ ಬಸವರಾಜು ರವರು ಚರಿತ್ರೆಯನ್ನು ಪ್ರವಾಚನ ಮಾಡಲಿದ್ದಾರೆ.

ಆಯಿತೋಳಿನ ಜಾನಪದ ಕಲಾವಿದರಾದ ಜಿ.ಎನ್.ವಿರೂಪಾಕ್ಷಪ್ಪ ಹಾರ್ಮೋನಿಯಂ, ಜಿ.ಸಿ.ಯಶವಂತಕುಮಾರ್ ತಬಲವನ್ನು ನುಡಿಸಲಿದ್ದಾರೆ.
ಅಕ್ಟೋಬರ್ 23ರ ಸೋಮವಾರ ಆಯುಧ ಪೂಜೆ, ಮಹಾನವಮಿ, ಶ್ರೀ ಸದ್ಗುರು ಕಬೀನಂದಾಶ್ರಮದ ಸಂಸ್ಕøತ ಪಾಠಶಾಲೆಯ ಶಿಕ್ಷಕರಾದ ಸುಬ್ರಾಯ ತಿಮ್ಮಣ್ಣ ಭಟ್ಟರಿಂದ ಚಂಡಿಕಾ ಹೋಮ ನಡೆಯಲಿದೆ. ಬನ್ನಿಯನ್ನು ಮುಡಿಯಲಾಗುವುದು. ಸಂಜೆ 7 ಗಂಟೆಗೆ ಶ್ರೀ ದೇವಿ ಪುರಾಣ ಮುಕ್ತಾಯವಾಗಲಿದೆ.

ಅಕ್ಟೋಬರ್ 24 ರಂದು ಮಂಗಳವಾರ ವಿಜಯದಶಮಿ ಸಂಜೆ 4 ಗಂಟೆಗೆ ಶ್ರೀ ಮಠದ ಕತೃಗಳಾದ ಶ್ರೀ ಸದ್ಗುರು ಕಬೀರಾನಂದ ಮಹಾ ಸ್ವಾಮಿಗಳವರ 117 ನೇ ವರ್ಷದ ಜಯಂತ್ಯೋತ್ವವ (ತೊಟ್ಟಿಲು ಪೂಜೆ) ಕಾರ್ಯಕ್ರಮ ನಡೆಯಲಿದೆ. ಪ್ರತಿ ದಿನ ಸಂಜೆ 5.30 ರಿಂದ 6.30ರವರೆಗೆ ಸಂಸ್ಕøತ ಪಾಠಶಾಲೆಯ ಶಿಕ್ಷಕಿಯಾದ ಶ್ರೀಮತಿ ಬಿ.ಕೆ.ಸುಮನ ಇವರಿಂದ ಲಲಿತಾ ಸಹಸ್ರನಾಮ ಸ್ತೋತ್ರ ನಡೆಸಿಕೊಡಲಿದ್ದಾರೆ. ಶ್ರೀ ದೇವಿಗೆ ನಿತ್ಯವು ಪಂಚಾಮೃತ ಅಭೀಷೇಕ ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *