ಇಂದಿನಿಂದ ಶರಣಸಂಸ್ಕೃತಿ ವಿಶೇಷ ಪ್ರವಚನಮಾಲೆ; ಭಕ್ತರಿಗೆ ಬಸ್ ವ್ಯವಸ್ಥೆ

suddionenews
1 Min Read

ಚಿತ್ರದುರ್ಗ, (ಅ.01) : ಶರಣ ಸಂಸ್ಕೃತಿ ಉತ್ಸವದ ಪೂರ್ವಭಾವಿಯಾಗಿ ಡಾ. ಶಿವಮೂರ್ತಿ ಮುರುಘಾ ಶರಣರ ಅಧ್ಯಕ್ಷತೆಯಲ್ಲಿ ಮುರುಘಾ ಮಠದ ಅನುಭವ ಮಂಟಪದಲ್ಲಿ 12 ದಿನ‌ ವಿಶೇಷ ಪ್ರವಚನಮಾಲೆ ಹಮ್ಮಿಕೊಳ್ಳಲಾಗಿದೆ.

ಅ.1 ರಿಂದ 12 ರವರೆಗೆ ನಿತ್ಯ ಸಂಜೆ 6.30 ರಿಂದ
8 ರವರೆಗೆ ಪ್ರವಚನ ನಡೆಯಲಿದೆ. ಧರ್ಮಜಾಗೃತಿ ಮತ್ತು ಶರಣ ಸಂಸ್ಕೃತಿಯ ಪ್ರಸಾರಕರೂ, ಪ್ರಸಿದ್ಧ ಪ್ರವಚನಕಾರರು ಆಗಿರುವ ಗದಗ ಜಿಲ್ಲೆ ಬೆಳ್ಳಟ್ಟಿ ವಿರಕ್ತಮಠದ ಶ್ರೀ ಬಸವರಾಜ ಸ್ವಾಮೀಜಿ ಪ್ರವಚನ ಮಾಲೆ ನಡೆಸಿಕೊಡಲಿದ್ದಾರೆ.

ಬಸ್ ವ್ಯವಸ್ಥೆ ಮಾರ್ಗ – 1 : ಸಂಜೆ 5.45 ಕ್ಕೆ ಹಳೇ ಮಾಧ್ಯಮಿಕ ಶಾಲಾ ಆವರಣದಿಂದ ಹೊರಟು ಕೆಳಗೋಟೆ ಬಸವೇಶ್ವರ ವೃತ್ತ, ಭುವನೇಶ್ವರಿ ವೃತ್ತ, ಸಿ.ಕೆ.ಪುರ, ಬಾಲಕರ ಸರ್ಕಾರಿ ಜ್ಯೂನಿಯರ್ ಕಾಲೇಜು ಮುಂಭಾಗದಿಂದ ರಂಗಯ್ಯನ ಬಾಗಿಲು ಮಾರ್ಗವಾಗಿ ದೊಡ್ಡಪೇಟೆ, ಚಿಕ್ಕಪೇಟೆ, ಬುರುಜಿನಹಟ್ಟಿ ಸರ್ಕಲ್‍ನಿಂದ, ಹೊಳಲ್ಕೆರೆ ರಸ್ತೆ ಮಾರ್ಗವಾಗಿ ಬಿವಿಕೆಎಸ್ ಲೇಔಟ್ ಮುಖಾಂತರ ಶ್ರೀಮಠ ತಲುಪುವುದು.

ಮಾರ್ಗ – 2 : ಸಂಜೆ 5.45ಕ್ಕೆ ಜೆ.ಸಿ.ಆರ್. ಸರ್ಕಲ್‍ನಿಂದ ಗಾಯತ್ರಿ ವೃತ್ತ ಮಾರ್ಗವಾಗಿ ಅಂಬೇಡ್ಕರ್ ವೃತ್ತ, ಡೆಂಟಲ್ ಕಾಲೇಜು ಮುಂಭಾಗ, ಶ್ರೀ ನೀಲಕಂಠೇಶ್ವರ ದೇವಸ್ಥಾನ, ಪ್ರಧಾನ ಅಂಚೆ ಕಛೇರಿ ರಸ್ತೆ, ಗುಮಾಸ್ತ ಕಾಲೋನಿ, ಮೆದೇಹಳ್ಳಿ ರಸ್ತೆ ಮುಖಾಂತರ ಶ್ರೀಮಠ ತಲುಪುವುದು. ಪ್ರವಚನ ಕಾರ್ಯಕ್ರಮ ಮತ್ತು ಪ್ರಸಾದ ಮುಗಿದ ನಂತರ ಪುನಃ ಆಯಾ ಮಾರ್ಗದ ಸ್ಥಳಗಳಿಗೆ ಬಸ್ಸುಗಳು ತೆರಳುವುವು ಎಂದು ಶ್ರೀಮಠ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *