ಮುರುಘಾಮಠದಲ್ಲಿ ಶರಣ ಸಂಸ್ಕೃತಿ ಉತ್ಸವ : ಸೆಪ್ಟೆಂಬರ್ 25ರಿಂದ ಯೋಗ, ಆರೋಗ್ಯ ಮತ್ತು ಆಧ್ಯಾತ್ಮ ಪ್ರವಚನ : ಆಸಕ್ತರಿಗೆ ವಾಹನ ಸೌಲಭ್ಯ

1 Min Read

 

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.23 : ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಶರಣ ಸಂಸ್ಕೃತಿ ಉತ್ಸವದ ಪೂರ್ವಭಾವಿಯಾಗಿ ದಿ. 25-9-2024 ರಿಂದ 4-10-2024ರವರೆಗೆ 10 ದಿನಗಳ ಕಾಲ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಯೋಗ ಆರೋಗ್ಯ ಆಧ್ಯಾತ್ಮ ಶಿಬಿರವನ್ನು ಆಯೋಜಿಸಲಾಗಿದೆ.

ಯೋಗಗುರು ವೈದ್ಯಶ್ರೀ ಚನ್ನಬಸವಣ್ಣ ಶಿಬಿರವನ್ನು ನಡೆಸಿಕೊಡಲಿದ್ದು, ಈ ಎರಡೂ ವಿಶೇಷ ಕಾರ್ಯಕ್ರಮಗಳಿಗೆ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಬರುವವರಿಗಾಗಿ ವಾಹನ ಸೌಕರ್ಯ ಕಲ್ಪಿಸಲಾಗಿದೆ.

ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ನಗರದಿಂದ ಶ್ರೀ ಮುರುಘಾಮಠಕ್ಕೆ ಬರುವವರಿಗೆ ರೂಟ್ ನಂಬರ್ 1 :- ವಿದ್ಯಾನಗರ, ತುರುವನೂರು ರಸ್ತೆಯ ವೆಂಕಟರಮಣ ದೇವಸ್ಥಾನ, ಆರ್.ಟಿ.ಓ ಕಚೇರಿ, ಚಳ್ಳಕೆರೆ ಗೇಟ್, ಐಯುಡಿಪಿ ಲೇಔಟ್ ನ ಹನ್ನೊಂದನೇ ಕ್ರಾಸ್ ನೀರಿನ ಟ್ಯಾಂಕ್, ಕೃಷ್ಣಾ ಗ್ರಾಮೀಣ ಬ್ಯಾಂಕ್, ಸ್ಟೇಡಿಯಂ ರಸ್ತೆ ಮಾರ್ಗವಾಗಿ ಜೋಗಿಮಟ್ಟಿ ರಸ್ತೆ, ಕರುವಿನಕಟ್ಟೆ ಸರ್ಕಲï, ಫಿಲ್ಟರ್ ಹೌಸ್, ಉಚ್ಚಂಗಿ ಎಲ್ಲಮ್ಮ ದೇವಸ್ಥಾನ, ಆನೆಬಾಗಿಲು ರಸ್ತೆ, ಗಾಂಧಿ ಸರ್ಕಲ್ ಮುಖಾಂತರವಾಗಿ ಶ್ರೀಮಠ ತಲುಪುತ್ತದೆ.

ರೂಟ್ ನಂ.2:- ಎನ್.ಹೆಚ್.-13 ಬಾಪೂಜಿ ಸ್ಕೂಲï, ಜೆಸಿಆರ್ ಸರ್ಕಲï, ಫಾರೆಸ್ಟ್ ಆಫೀಸ್, ಸಂಗಮೇಶ್ವರ ಸ್ಟೋರ್ಸ್, ಬಸವೇಶ್ವರ ಸರ್ಕಲï, ಮೆಜೆಸ್ಟಿಕ್ ಸರ್ಕಲï, ಅಂಬೇಡ್ಕರ್ ವೃತ್ತ, ಡೆಂಟಲ್ ಕಾಲೇಜು, ನೀಲಕಂಠೇಶ್ವರ ದೇವಸ್ಥಾನದ ಮುಖಾಂತರ ಶ್ರೀಮಠ ತಲಪುತ್ತದೆ.

ರೂಟ್ ನಂ:-3, ಮಾಳಪ್ಪನಹಟ್ಟಿ, ಧವಳಗಿರಿ ಬಡಾವಣೆ, ಶಾರದಮ್ಮ ರುದ್ರಪ್ಪ ಕಲ್ಯಾಣ ಮಂಟಪ, ಹೆಡ್ ಫೋಸ್ಟ್ ಆಫೀಸ್, ರೈಲ್ವೆ ಸ್ಟೇಷನ್ ರಸ್ತೆ, ಗಾರೆಹಟ್ಟಿ ಕ್ರಾಸ್‍ನಿಂದ ಶ್ರೀಮಠ ತಲುಪುತ್ತದೆ. ಕಾರ್ಯಕ್ರಮ ಮತ್ತು ವಾಹನ ಸೌಲಭ್ಯದ ಮಾಹಿತಿಗಾಗಿ ದೂ. 9980724341, 8884226676, 9740037176 ಸಂಪರ್ಕಿಸಲು ಶ್ರೀಮಠದ ಪ್ರಕಟಣೆಯಲ್ಲಿ ಕೋರಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *