ದೇವಸ್ಥಾನಗಳಿಂದ ವಿವೇಕ, ವಿನಯ, ವಿಧೆಯತೆ ವಿಕಾಸವಾಗಬೇಕು, ಮೌಡ್ಯ ಕಂದಾಚಾರವಲ್ಲ : ಡಾ.ಶ್ರೀಶಾಂತವೀರ ಮಹಾಸ್ವಾಮೀಜಿ

1 Min Read

 

ಹೊಸದುರ್ಗ, (ನ.12) :  ದೇವಸ್ಥಾನಗಳಿಂದ ಜನರಲ್ಲಿ ಭಕ್ತಿ ಭಯ, ಸೌಹಾರ್ದತೆ ಸಹಬಾಳ್ವೆ ಹೆಚ್ಚಾಗಬೇಕು. ಜಾತೀಯತೆ ಶೋಷಣೆ ತಾರತಮ್ಯ ದೂರವಾಗಬೇಕು ಎಂದು ಡಾ.ಶ್ರೀಶಾಂತವೀರ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.

ಅವರು ತಾಲ್ಲೂಕಿನ ತೊಣಚೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಕಳಶಾರೋಹಣ ಹಾಗೂ ಧಾರ್ಮಿಕ ಕಾರ್ಯಕ್ರಮ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ದೇಶದ ಸಂವಿಧಾನದ ಆಶಯದಂತೆ ಸರ್ವರೂ ಸಮಾನವಾಗಿ ಬದುಕಬೇಕು. ಅದರೆ ನಾಗರಿಕತೆ ಕಲಿತ ಮಾನವ ಅನಾಗರಿಕನಾಗಿ ನಡೆದುಕೊಳ್ಳುತ್ತಿರುವುದು ಅಪಾಯಕಾರಿ. ನಗರ ಜೀವನಕ್ಕೆ ಮಾರುಹೋಗಿ ಗ್ರಾಮೀಣ ಸಂಸ್ಕೃತಿ ಮರೆತು ಸಂಬಂಧಗಳಿಂದ ದೂರವಾಗುತ್ತಿದ್ದಾನೆ ಎಂದು ತಿಳಿಸಿದರು.

ದೇವಸ್ಥಾನಗಳ ಮೂಲ ಅಶಯವನ್ನೇ ಮರೆತ ಕೆಲ ಮೂಲಭೂತವಾದಿಗಳು ವರ್ಣಶ್ರಮ ಮನಸ್ಸಿನ ಮನಸ್ಥಿತಿಯ ಜನರು ಇನ್ನೂ ಇದ್ದಾರೆ.ನಮ್ಮ ಮನಸ್ಸಿನ ನೆಮ್ಮದಿಗೆ ಸಂಸ್ಕಾರ ಸಂಸ್ಕೃತಿ ಉಳಿವಿಗಾಗಿ ಧಾರ್ಮಿಕ ಆಚರಣೆಗಾಗಿ ಮನುಷ್ಯ ಮನುಷ್ಯರ ನಡುವಿನ ಸಂಬಂಧಕ್ಕಾಗಿ ದೇವಸ್ಥಾನ ಬೇಕು. ಎಷ್ಟೇ ಹಣ ಅಧಿಕಾರ ಸಿಕ್ಕರು ದಯೆ ಕರುಣೆ ವಿನಯತೆಯನ್ನು ಮರೆಯದೆ ಪಾಲಿಸಿ ತಂದೆ ತಾಯಿಯನ್ನು ದೇವರಂತೆ ಕಾಣಿರಿ ಎಂದು ಆಶೀರ್ವಚನ ನೀಡಿದರು.

ಸಮಾರಂಭಲ್ಲಿ ಹೊಸದುರ್ಗದ ಕನಕಗುರುಪೀಠದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮೀಜಿ, ಭಗಿರಥ ಪೀಠದ ಪರಮಪೂಜ್ಯ ಡಾ. ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿ, ಕೇಂದ್ರ ಕುಂಚಿಟಿಗ ಸಂಘದ ಅಧ್ಯಕ್ಷರಾದ ಕಲ್ಲೇಶಪ್ಪ ಕೋಡಿಹಳ್ಳಿ ತಮ್ಮಣ್ಣ ಪುಟ್ಟಣ್ಣ ಓಂಕರಪ್ಪ ಹನುಮಂತಪ್ಪ ರಾಜೇಶ್ ಸುತ್ತ ಮುತ್ತಲಿನ ಗ್ರಾಮಗಳ ಭಕ್ತವೃಂದ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *