ಸುದ್ದಿಒನ್, ಚಿತ್ರದುರ್ಗ, (ಜೂ.27) : ವಿದ್ಯಾನಗರ ವಾಸಿ ಶ್ರೀಮತಿ ಶಾಂತಮ್ಮ (69) ಇಂದು(ಮಂಗಳವಾರ) ಬೆಳಗಿನ ಜಾವ ನಿಧನರಾದರು.
ಮೃತರು ಹಾಸ್ಯ ಸಾಹಿತಿ ದಿವಂಗತ ಬಿ ತಿಪ್ಪೇರುದ್ರಪ್ಪನವರ ಧರ್ಮ ಪತ್ನಿ. ಇವರಿಗೆ ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಶಾಂತಮ್ಮ ಅವರ ಇಚ್ಚೆಯಂತೆ ನೇತ್ರದಾನ ಹಾಗೂ ದೇಹದಾನ ಮಾಡಲು ಕುಟುಂಬದವರು ನಿರ್ಧರಿಸಿದ್ದಾರೆ. ಈಗಾಗಲೇ ಬಸವೇಶ್ವರ ಪುನರ್ಜ್ಯೋತಿ ಐ ಬ್ಯಾಂಕ್ ಗೆ ಕಣ್ಣುಗಳನ್ನು ದಾನ ಮಾಡಲಾಗಿದ್ದು, ಇಂದು ಮಧ್ಯಾಹ್ನ 3:00 ಗಂಟೆಗೆ ಶ್ರೀ ಬಸವೇಶ್ವರ ಮೆಡಿಕಲ್ ಕಾಲೇಜ್‌ಗೆ ದೇಹದಾನ ಮಾಡಲಾಗುವುದು ಎಂದು ಕುಟುಂಬ ಮೂಲದವರು ತಿಳಿಸಿದ್ದಾರೆ.
ದೂರವಾಣಿ ಸಂಖ್ಯೆ : 94495 01298
ಮೃತರ ಪತಿ ತಿಪ್ಪೇಸ್ವಾಮಿಯವರು ಕೂಡಾ ಮರಣಾನಂತರ ಅವರ ದೇಹವನ್ನು ದಾನ ಮಾಡಿದ್ದರು. ಅವರಂತೆಯೇ ಶಾಂತಮ್ಮನವರು ಕೂಡಾ ದೇಹ ದಾನ ಮಾಡುವ ಮೂಲಕ ಸಾವಿನಲ್ಲಿಯೂ ಸಾರ್ಥಕತೆಯನ್ನು ಮೆರೆದಿದ್ದಾರೆ.