ಬೆಂಗಳೂರು: ಬೆಂಗಳೂರಿನ ಯಾವುದಾದರೂ ಒಂದು ಮೆಟ್ರೋ ನಿಲ್ದಾಣಕ್ಕೆ ಶಂಕರ್ ನಾಗ್ ಹೆಸರಿಡಲು ಸಿಎಂ ಗೆ ಮನವಿ ಮಾಡುತ್ತೇವೆ ಎಂದು ಸಚಿವ ಬೈರತಿ ಬಸವರಾಜ್ ಹೇಳಿದರು. ಈ ವೇಳೆ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಂಕರ್ ನಾಗ್ ಕನ್ನಡ ಚಿತ್ರರಂಗಕ್ಕೆ ತಮ್ಮದೆ ಕೊಡುಗೆ ಕೊಟ್ಟಿದ್ದಾರೆ, ಖಂಡಿತವಾಗಿ ಈ ಬಗ್ಗೆ ಸಿಎಂ ಬಸವರಾಜ್ ಜೊಮ್ಮಯಿಯವರ ಜೊತೆ ಚರ್ಚೆ ಮಾಡುತ್ತೇವೆ ಎಂದರು.
ಇನ್ನೂ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರಿಂದ ನನ್ನ ಇಲಾಖೆಗೆ ಸಂಬಂಧಿಸಿದ ಕೆಲವು ಸಮಸ್ಯೆ ಬಂದಿವೆ. ಆ ಅರ್ಜಿಗಳಿಗೆ ಸಂಬಂಧಿಸಿದ ಅಧಿಕಾರಿಗಳನ್ನ ಕರೆಸಿ ಮಾತನಾಡುತ್ತೇನೆ. ಬಿಬಿಎಂಪಿ ಚುನಾವಣೆ ನಡೆಸಲು ನಮ್ಮದೇನು ಅಭ್ಯಂತರ ಇಲ್ಲ. ಚುನಾವಣೆ ಯಾವಾಗ ನಡೆದ್ರೂ ಬಿಜೆಪಿ ಪಕ್ಷ ಸಿದ್ಧವಿದೆ.198 ವಾರ್ಡ್ ಇತ್ತು, ಹೊರಮಾವು ವಾರ್ಡ್ 25 ರಲ್ಲಿ ಒಂದುವರೆ ಲಕ್ಷ ಜನರಿದ್ರು.ಇಷ್ಟು ಜನ ಒಂದೆಡೆ ಇದ್ರೆ ಚುನಾವಣೆ ನಡೆಸೋದು ಹೇಗೆ.? ಹೀಗಾಗಿ ಡಿ-ಲಿಮಿಟೇಷನ್ ಮಾಡಲು ಮುಂದಾಗಿದೆ. ಈ ಬಗ್ಗೆ ಸಿಎಂ ಜೊತೆ ಮಾತನಾಡಿದ್ದೇವೆ.
ಚುನಾವಣೆಗೆ ಹೆದರುವ ಪಕ್ಷ ನಮ್ಮದಲ್ಲ. ನಾವೇ ಅಧಿಕಾರಕ್ಕೆ ಬಂದು ಮೇಯರ್ ಕೂಡ ಆಗ್ತೀವಿ.
ಜನರ ಋಣ ತೀರಿಸೋ ಕೆಲಸ ಮಾಡ್ತೀವಿ. ಯಾವುದೇ ಪ್ರದೇಶದಲ್ಲಿ ರಸ್ತೆ ಸಮಸ್ಯೆಗಳಿದ್ರೆ ಅದನ್ನ ನನ್ನ ಗಮನಕ್ಕೆ ತನ್ನಿ ಎಂದು ಸಚಿವ ಬೈರತಿ ಬಸವರಾಜ್ ಹೇಳಿದರು .