Shani Amavasya 2023 :
ಹಿಂದೂ ಪಂಚಾಂಗದ ಪ್ರಕಾರ, ಪ್ರತಿ ತಿಂಗಳ ಕೃಷ್ಣ ಪಕ್ಷದ ಕೊನೆಯ ತಿಥಿಯನ್ನು ಅಮವಾಸ್ಯೆ ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಪ್ರತಿ ತಿಂಗಳು ಅಮಾವಾಸ್ಯೆ ಇರುತ್ತದೆ.
ಆದರೆ ಇಂಗ್ಲಿಷ್ ಕ್ಯಾಲೆಂಡರ್ ನಲ್ಲಿ ಬರುವ ಮೊದಲ ಅಮಾವಾಸ್ಯೆಗೆ ಹೆಚ್ಚಿನ ಮಹತ್ವವಿದೆ. ಈ ಅಮವಾಸ್ಯೆಯು ಶನಿವಾರದಂದು ಬರುವುದರಿಂದ ಇದನ್ನು ಶನಿಶ್ಚರಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಇದಲ್ಲದೆ, ಸುಮಾರು 30 ವರ್ಷಗಳ ನಂತರ ಬಂದಿರುವುದರಿಂದ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಹಿನ್ನಲೆಯಲ್ಲಿ 2023ನೇ ಇಸವಿಯಲ್ಲಿ ಶನಿ ಅಮಾವಾಸ್ಯೆ ಯಾವಾಗ? ಈ ಶುಭ ದಿನದಂದು ಶನಿದೇವನ ಆಶೀರ್ವಾದ ಪಡೆಯಲು ಯಾವ್ಯಾವ ಪರಿಹಾರಗಳನ್ನು ಅನುಸರಿಸಬೇಕು ? ಎಂಬುದನ್ನು ತಿಳಿಯೋಣ…!
ಹಿಂದೂ ಪಂಚಾಂಗದ ಪ್ರಕಾರ, ಈ ಅಮವಾಸ್ಯೆಯು 21 ಜನವರಿ 2023 ರಂದು ಬಂದಿದೆ. ಅಮಾವಾಸ್ಯೆ ತಿಥಿ ಶನಿವಾರ ಬೆಳಗ್ಗೆ 6:17 ಕ್ಕೆ ಪ್ರಾರಂಭವಾಗುತ್ತದೆ. ಮರುದಿನ ಅಂದರೆ 22 ನೇ ಜನವರಿ 2023 ಭಾನುವಾರ ಮಧ್ಯ ರಾತ್ರಿ 2:22 ವರೆಗೂ ಇರುತ್ತದೆ. ಈ ಅಮವಾಸ್ಯೆಯನ್ನು ಮೌನಿ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ಈ ದಿನ ಪೂರ್ವ ಆಷಾಢ ಮತ್ತು ಉತ್ತರ ಆಷಾಢ ನಕ್ಷತ್ರಗಳ ಪ್ರಭಾವ ಇರುತ್ತದೆ. ಇವುಗಳ ಜತೆಗೆ ಹರ್ಷ ಯೋಗ, ಚತುಷ್ಪಾದ ಕರಣ ಯೋಗ ಕೂಡ ಅಮವಾಸ್ಯೆ ತಿಥಿಯಲ್ಲಿ ರೂಪುಗೊಳ್ಳಲಿದೆ. ಇದಲ್ಲದೆ, ಈ ಅವಧಿಯಲ್ಲಿ ಶನಿ ದೇವ ಮಕರ ರಾಶಿಯಿಂದ ಕುಂಭ ರಾಶಿಗೆ ಸಾಗುತ್ತಾನೆ. ಈ ಸಮಯದಲ್ಲಿ ಶನಿ ದೇವರ ಕೃಪೆಗೆ ಪಾತ್ರರಾಗಲು ಉತ್ತಮ ಅವಕಾಶಗಳಿವೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಾಘ ಮಾಸದಲ್ಲಿ ಮೂರು ಮುಖ್ಯ ಗ್ರಹಗಳಾದ ಸೂರ್ಯ, ಶನಿ ಮತ್ತು ಶುಕ್ರರು ಕುಂಭ ರಾಶಿಯಲ್ಲಿ ಸಂಗಮಿಸುತ್ತಾರೆ. ಈ ಸಮಯದಲ್ಲಿ ತ್ರಿಗ್ರಾಹಿ ಸಂಯೋಗ ನಡೆಯುತ್ತದೆ. ಇದು ಸುಮಾರು 30 ವರ್ಷಗಳ ನಂತರ ಸಂಭವಿಸುತ್ತದೆ. ಈ ಮೂರು ಗ್ರಹಗಳ ಸಂಯೋಜನೆಯಿಂದ ಕೆಲವು ಶುಭ ಯೋಗಗಳು ಸಂಭವಿಸುತ್ತವೆ. ಈ ಸಂದರ್ಭದಲ್ಲಿ ಪವಿತ್ರವಾದ ಗಂಗಾ ನದಿ ಅಥವಾ ಹರಿಯುವ ನೀರಿನಲ್ಲಿ ಸ್ನಾನ ಮಾಡಬೇಕು.
ಶನಿ ದೇವರ ಅನುಗ್ರಹ ಪಡೆಯಲು ಮತ್ತು ಶನಿ ದೋಷದಿಂದ ಪರಿಹಾರ ಪಡೆಯಲು ಶನಿ ಅಮಾವಾಸ್ಯೆಯ ದಿನ ಬೆಳಿಗ್ಗೆ ಸ್ನಾನದ ನಂತರ ಶನಿ ದೇವರನ್ನು ಪೂಜಿಸಬೇಕು. ಪೂಜೆಯ ಅಂಗವಾಗಿ ನೀಲಿ ಹೂವುಗಳು, ಶಮಿ ಎಲೆಗಳು, ಕಪ್ಪು ಎಳ್ಳು ಮತ್ತು ಸಾಸಿವೆ ಎಣ್ಣೆಯನ್ನು ಅರ್ಪಿಸಬೇಕು. ನಂತರ ಶನಿ ಚಾಲೀಸವನ್ನು ಪಠಿಸಬೇಕು. ಅಂತಿಮವಾಗಿ ಶನಿ ದೇವರಿಗೆ ಆರತಿಯನ್ನು ಅರ್ಪಿಸಬೇಕು.
ಶನಿ ಅಮಾವಾಸ್ಯೆಯ ದಿನ ದಾನ ಮಾಡುವುದರಿಂದ ಹೆಚ್ಚಿನ ಪುಣ್ಯ ಬರುತ್ತದೆ. ಈ ಶುಭ ದಿನದಂದು ಕಬ್ಬಿಣ, ಉಕ್ಕಿನ ಪಾತ್ರೆಗಳು, ನೀಲಿ ಅಥವಾ ಕಪ್ಪು ಬಟ್ಟೆ, ಹಣ್ಣುಗಳನ್ನು ದಾನ ಮಾಡಬೇಕು. ಅಲ್ಲದೆ ಬಡ ಬ್ರಾಹ್ಮಣರಿಗೆ ದಾನ ಮಾಡುವುದರಿಂದ ಶನಿ ಸಾಡೇ ಸಾತ್ ನಿಂದ ಪಾಪಗಳು ಕಳೆದು ಪರಿಹಾರ ಸಿಗುತ್ತದೆ ಎಂದು ಹಲವರು ನಂಬುತ್ತಾರೆ.
ಶನಿ ಅಮಾವಾಸ್ಯೆಯಂದು ಸ್ನಾನದ ನಂತರ ಅರಳಿ ಮರವನ್ನು ಪೂಜಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನ ಅರಳಿ ಮರವನ್ನು ಪೂಜಿಸಬೇಕು ಮತ್ತು ನೀರನ್ನು ಅರ್ಪಿಸಬೇಕು. ಈ ದಿನ ಸಂಜೆ ಸಾಸಿವೆ ಎಣ್ಣೆಯಿಂದ ದೀಪವನ್ನು ಹಚ್ಚಬೇಕು. ಈ ಪರಿಹಾರಗಳನ್ನು ಅನುಸರಿಸಿದರೆ ಶನಿ ದೋಷದಿಂದ ಮುಕ್ತರಾಗುತ್ತಾರೆಂಬ ನಂಬಿಕೆಯಿದೆ.
ಪ್ರಮುಖ ಸೂಚನೆ : ಇಲ್ಲಿ ಒದಗಿಸಲಾದ ಎಲ್ಲಾ ಮಾಹಿತಿಗಳು ಮತ್ತು ಪರಿಹಾರಗಳು ಧಾರ್ಮಿಕ ನಂಬಿಕೆಗಳನ್ನು ಆಧರಿಸಿವೆ. ಇವುಗಳನ್ನು ಕೇವಲ ಊಹೆಗಳ ಆಧಾರದ ಮೇಲೆ ನೀಡಲಾಗಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.