ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ‘ಶಕ್ತಿ ಯೋಜನೆ’ ಕಾರ್ಯಕ್ರಮ ಕ್ಕೆ ತುರುವನೂರಿನಲ್ಲಿ ಚಾಲನೆ

1 Min Read

ವರದಿ ಮತ್ತು ಫೋಟೋ ಕೃಪೆ : ಶ್ರೀಧರ, ತುರುವನೂರು, ಮೊ : 78997 89545

 

ಸುದ್ದಿಒನ್, ಚಿತ್ರದುರ್ಗ, (ಜೂ.11): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರೆಂಟಿ ಕಾರ್ಯಕ್ರಮಗಳಲ್ಲಿ ಒಂದಾದ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ‘ಶಕ್ತಿ ಯೋಜನೆ’ಗೆ ತುರುವನೂರು ಗ್ರಾಮದಲ್ಲಿ ಜೂನ್ 11ರ ಭಾನುವಾರ ಮಧ್ಯಾಹ್ನ 1ಗಂಟೆಗೆ ಚಾಲನೆ ನೀಡಲಾಯಿತು.

ಗ್ರಾಮದ ಬಸ್ ನಿಲ್ದಾಣದಲ್ಲಿ ತುರುವನೂರು-ಚಿತ್ರದುರ್ಗ ಮಾರ್ಗದ ಕೆಎಸ್ಸಾರ್ಟಿಸಿ ಬಸ್ಸಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ್ ಪೂಜೆ ಮಾಡುವ ಮ‌ೂಲಕ  ಚಾಲಕ, ನಿರ್ವಾಹಕರಿಗೆ ಸಿಹಿ ತಿನಿಸಿ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಆರಂಭ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮದ ಕಾಲೇಜು ವಿದ್ಯಾರ್ಥಿನಿಯರು ಸೇರಿದಂತೆ ನೂರಾರು ಮಹಿಳೆಯರು, ಯುವಕರು, ಗ್ರಾಮಸ್ಥರು ಸೇರಿದ್ದರು.ಗ್ರಾಮ ಪಂಚಾಯಿತಿ ಸದಸ್ಯ ಡಿ.ಆರ್.ಮಂಜುನಾಥ್, ಮುಖಂಡರಾದ ನಾಗರಾಜಪ್ಪ, ಕಾಕಿ ಹನುಮಂತರೆಡ್ಡಿ, ಕಜ್ಜೇರು ಚಿದಾನಂದಪ್ಪ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ನಾಗೇಂದ್ರ ಪ್ಪ,ನಟೇಶಪ್ಪ, ವೈಸ್ ಚಂದ್ರಪ್ಪ, ಮುಸ್ಟೂರು ಹನುಮಂತಪ್ಪ, ಹೊನ್ನೂರಪ್ಪ ಹಾಗೂ ಇತರರು ಈ ವೇಳೆ ಉಪಸ್ಥಿತರಿದ್ದರು.
ನಂತರ ಮಹಿಳೆಯರನ್ನು ಒಳಗೊಂಡ ಸಾರಿಗೆ ಬಸ್ ಚಿತ್ರದುರ್ಗಕ್ಕೆ ಸಂಚರಿಸಿತು.

Share This Article
Leave a Comment

Leave a Reply

Your email address will not be published. Required fields are marked *