ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಟ್ವಿಟ್ಟರ್ ನಲ್ಲಿ ತಿರುಗೇಟು ನೀಡಿದೆ.
ಶಹಬ್ಬಾಸ್ #HitlerSarkara !
ಉಚಿತ ಬಸ್ ಪ್ರಯಾಣ ವೈಫಲ್ಯ ಸರ್ಕಾರಕ್ಕಿಲ್ಲ ತಲೆ ಬಿಸಿ ☹️
ದರ ಏರಿಕೆಗೂ ಡೋಂಟ್ ಕೇರ್ 👽
ಅನ್ನಭಾಗ್ಯ ಕೊಡಲು ಡೋಂಗಿತನ 😼
ಗ್ಯಾರಂಟಿಗಳ ಬದಲು ಕಿವಿ ಮೇಲೆ ಹೂ ಇಡಲು ನಿರ್ಧಾರ 🌸ಸರ್ಕಾರದ ಜನವಿರೋಧಿ ನಿಲುವುಗಳ ವಿರುದ್ಧ ಸೊಲ್ಲೆತ್ತಿದರೆ ಮೊದಲು ಬಂಧಿಸಿ 👮♀️ @siddaramaiah ರವರೇ, ನಿಮ್ಮ ತುಘಲಕ್ ಆಡಳಿತ… pic.twitter.com/7ERt4dKqLe
— BJP Karnataka (@BJP4Karnataka) June 20, 2023
ಶಹಬ್ಬಾಸ್ #HitlerSarkara ! ಉಚಿತ ಬಸ್ ಪ್ರಯಾಣ ವೈಫಲ್ಯ ಸರ್ಕಾರಕ್ಕಿಲ್ಲ ತಲೆ ಬಿಸಿ ☹️
ದರ ಏರಿಕೆಗೂ ಡೋಂಟ್ ಕೇರ್ 👽
ಅನ್ನಭಾಗ್ಯ ಕೊಡಲು ಡೋಂಗಿತನ 😼
ಗ್ಯಾರಂಟಿಗಳ ಬದಲು ಕಿವಿ ಮೇಲೆ ಹೂ ಇಡಲು ನಿರ್ಧಾರ. ಸರ್ಕಾರದ ಜನವಿರೋಧಿ ನಿಲುವುಗಳ ವಿರುದ್ಧ ಸೊಲ್ಲೆತ್ತಿದರೆ ಮೊದಲು ಬಂಧಿಸಿ. @siddaramaiah ರವರೇ, ತುಘಲಕ್ ಆಡಳಿತ ಬಹಳ ದಿನ ನಡೆಯುವುದಿಲ್ಲ ಎಚ್ಚರ ಎಂದು ಟ್ವೀಟ್ ಮಾಡಿದೆ.
ಬಾಳೇಹೊನ್ನೂರಿನ ರೇಣುಕಾನಗರ ಮಠದ ರಸ್ತೆಯ ನಿವಾಸಿ ಅವಿನಾಶ್ ಗೌಡ ಎಂಬುವವರು ಫೇಸ್ ಬುಕ್ ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದರು ಎಂದು ಆರೋಪಿಸಿ, ಬಾಳೇಹೊನ್ನೂರು ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹನೀಫ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ಆರೋಪಿಯನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.