ಜುಲೈ ತಿಂಗಳಲ್ಲಿ ಜಾರಿಯಗಾಲಿದೆ ಏಳನೇ ವೇತನ ಆಯೋಗ : ಸಿಎಂ ಭರವಸೆ

1 Min Read

ಬೆಂಗಳೂರು: ರಾಜ್ಯ ಸರ್ಕಾರಿ‌ ನೌಕರರು ಏಳನೇ ವೇತನ ಆಯೋಗ ಯಾವಾಗ ಜಾರಿಯಾಗಲಿದೆ ಎಂಬ ಕುತೂಹಲ ಸಾಕಷ್ಟಿದೆ. ಕೆಲ ದಿನಗಳಿಂದ ಕಾಯುತ್ತಿದ್ದಾರೆ ಕೂಡ. ಇದೀಗ ಜುಲೈ ತಿಂಗಳಲ್ಲಿ ಜಾರಿಯಾಗಬಹುದು ಎಂಬ ಭರವಸೆಯನ್ನು ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ. ಸಹಕಾರಿ ನೌಕರರ ವೇತನ ಪರಿಷ್ಕರಣೆಗೆ ರಚಿಸಿದ್ದ ಏಳನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜುಲೈ 1ರಿಂದ ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ.

ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಜುಲೈ ಒಂದರಿಂದ ಅನ್ವಯಯವಾಗುವಂತೆ ಪರಿಷ್ಕೃತ ವೇತನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ಸುಧಾಕರ ರಾವ್ ಅಧ್ಯಕ್ಷತೆಯಲ್ಲಿ 2022ರ ನವೆಂಬರ್ 19ರಂದು 7ನೇ ವೇತನ ಆಯೋಗ ರಚನೆ ಮಾಡಲಾಗಿತ್ತು. ವೇತನ ಪರಿಷ್ಕರಣೆ ಕುರಿತು ಅಧ್ಯಯನ ಮಾಡಿದ ಆಯೋಗ ಮಾರ್ಚ್ 16ರಂದು ವರದಿ ಸಲ್ಲಿಕೆ ಮಾಡಿತ್ತು. ಅಂದಿನಿಂದ ನೀತಿ ಸಂಹಿತೆ ಜಾರಿಯಾದ್ದ ಕಾರಣ ವೇತನ ಪರಿಷ್ಕರಣೆ ಬಗ್ಗೆ ಕ್ರಮ ಕೈಗೊಂಡಿರಲಿಲ್ಲ.

ವೇತನ ಆಯೋಗ ಶೇಕಡ 31ರಷ್ಡು ತುಟ್ಟಿ ಭತ್ಯೆಯನ್ನು ಮೂಲ ವೇತನದಲ್ಲಿ ವಿಲೀನಗೊಳಿಸುವ ಜೊತೆಗೆ ಶೇಕಡ 27.50ರಷ್ಟು ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ. ರಾಜ್ಯ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನವನ್ನು ತಿಂಗಳಿಗೆ ಅಸ್ತಿತ್ವದಲ್ಲಿರುವ 17,000 ದಿಂದ 27 ಸಾವಿರಕ್ಕೆ ಪರಿಷ್ಕರಿಸಲು ಶಿಫಾರಸು ಮಾಡಲಾಗಿದೆ. ವೇತನ ರಚನೆಯಲ್ಲಿ ಕನಿಷ್ಠ ಮತ್ತು ಗರಿಷ್ಠ ನಡುವೆ ಅಸ್ತಿತ್ವದಲ್ಲಿರುವ 1:8.86 ಅನುಪಾತವನ್ನು ಹೆಚ್ಚು ಕಡಿಮೆ ಹಾಗೇ ಉಳಿಸಿಕೊಳ್ಳುವುದು ಮತ್ತು ಗರಿಷ್ಠ 2,41,200 ರೂಪಾಯಿಗೆ ಶಿಫಾರಸ್ಸು ಮಾಡಲು ಆಯೋಗವೂ ಶಿಫಾರಸು ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *