ಪಂಜಾಬ್: ರಾಜ್ಯದಲ್ಲಿ ಈ ಬಾರಿ ಆಪ್ ಪಕ್ಷ ಸರ್ಕಾರ ರಚನೆ ಮಾಡಿದೆ. ಹೊಸ ಸರ್ಕಾರ ರಚನೆಯಾದ ಬೆನ್ನಲ್ಲೆ ಸಾಕಷ್ಟು ಜನರ ಭದ್ರತೆಯನ್ನು ಸರ್ಕಾರ ವಾಪಾಸ್ ಪಡೆದಿತ್ತು. ಇದರ ಬೆನ್ನಲ್ಲೇ ಕಾಕತಾಳೀಯವೆಂಬಂತೆ ಕಾಂಗ್ರೆಸ್ ನಾಯಕ ಸಿಧು ಹತ್ಯೆಯಾಗಿತ್ತು. ಜೀಪಿನಲ್ಲಿ ಹೋಗುತ್ತಿದ್ದ ಸಿಧು ತಡೆದು, ಗುಂಡಿನ ದಾಳಿ ನಡೆಸಿದ್ದರು. ಈ ಘಟನೆಯ ಬೆನ್ನಲ್ಲೇ ಪಂಜಾಬ್ ಹೈಕೋರ್ಟ್ ಆಪ್ ಸರ್ಕಾರಕ್ಕೆ ಸೂಚನೆ ನೀಡಿದೆ.
434 ಮಂದಿಯ ಭದ್ರತೆಯನ್ನು ವಾಪಾಸ್ ನೀಡುವಂತೆ ಆದೇಶ ಹೊರಡಿಸಿದೆ. ಮುಂದಿನ ಐದು ದಿನದ ಒಳಗೆ ಭದ್ರತೆಯನ್ನು ವಾಒಅಸ್ ನೀಡುವಂತೆ ಆಪ್ ಸರ್ಕಾರಕ್ಕೆ ಹೈಕೋರ್ಟ್ ಗಡುವು ನೀಡಿದೆ. ಅಷ್ಟೇ ಅಲ್ಲ ಭದ್ರತೆಯ ಕುರಿತು ರಿಪೋರ್ಟ್ ಸಲ್ಲಿಸಬೇಕೆಂದು ಸೂಚನೆ ನೀಡಿದೆ.
ಪಂಜಾಬ್ ನಲ್ಲಿ ಅಧಿಕಾರಕ್ಕೆ ಬಂದ ಬಳಿಕ ಆಪ್ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿತ್ತು. ನಿವೃತ್ತ ಪೊಲೀಸ್ ಅಧಿಕಾರಿಗಳು, ಧಾರ್ಮಿಕ ಮುಖಂಡರು ಮತ್ತು ರಾಜಕೀಯ ವ್ಯಕ್ತಿಗಳಿಗೆ ನೀಡಿದ್ದ ಭದ್ರತೆಯ ಬಗ್ಗೆ ಯೋಚಿಸಿತ್ತು. ಬಳಿಕ 424 ಮಂದಿಯ ಭದ್ರತೆಯನ್ನು ವಾಪಾಸ್ ಪಡೆದಿತ್ತು. ಅದರ ಪರಿಣಾಮ ಸಿಧು ಹತ್ಯೆಯಾಗಿದೆ. ಹೀಗಾಗಿ ಹೈಕೋರ್ಟ್ ಮತ್ತೆ ಸೂಚನೆ ನೀಡಿದ್ದು, ಆಪ್ ಸರ್ಕಾರಕ್ಕೆ ಮುಖಭಂಗವಾದಂತಾಗಿದೆ.