ಸಾಹಿತ್ಯ ಪರಿಷತ್ತಿಗೆ ಸೇವಾ ಮನೋವೃತ್ತಿಯುಳ್ಳವರು ಅಗತ್ಯ : ಆರ್. ಮಲ್ಲಿಕಾರ್ಜುನಯ್ಯ

1 Min Read

ಚಿತ್ರದುರ್ಗ, (ನ.10) : ಸೇವಾ ಮನೋವೃತ್ತಿಯುಳ್ಳವರು ಸಾಹಿತ್ಯ ಪರಿಷತ್ತಿಗೆ ಅಗತ್ಯ ಎಂದು ಕಸಾಪ ಮಾಜಿ ಅಧ್ಯಕ್ಷ ಆರ್. ಮಲ್ಲಿಕಾರ್ಜುನಯ್ಯ ಹೇಳಿದ್ದಾರೆ.

ಮಂಗಳವಾರ ಚಿತ್ರದುರ್ಗದಲ್ಲಿ ಸಮಾನ ಮನಸ್ಕರ ಸಭೆಯಲ್ಲಿ ಮಾತನಾಡಿದರು. ಸ್ವಾರ್ಥಪರವಾದ ಹಾಗೂ ಸರ್ವಾಧಿಕಾರಿ ಮನೋವೃತ್ತಿಯ ಅಧ್ಯಕ್ಷರುಗಳಿಂದ ಸಾಹಿತ್ಯದ ಸಂಘಟನೆ ಸಾಧ್ಯವಿಲ್ಲ. ಆದ್ದರಿಂದ ಪ್ರೀತಿ ವಿಶ್ವಾಸಗಳಿಂದ ಸಂಸ್ಥೆಯನ್ನು ಕಟ್ಟಬೇಕಾಗಿದೆ. ಇದೀಗ ಸ್ಪರ್ಧೆಯಲ್ಲಿರುವ ಕೆ.ಎಂ.ಶಿವಸ್ವಾಮಿ ಶಿಕ್ಷಕರಾಗಿದ್ದು, ಸಮಸ್ಯೆಗಳಿಗೆ ಸ್ಪಂದಿಸುವ ಗುಣ ಹೊಂದಿದ್ದಾರೆ.

ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಸ್ಥೆಯನ್ನು ಮುನ್ನೆಡೆಸುವುದು ಅಗತ್ಯ. ಹಿಂದಿನ ಅವಧಿಯಲ್ಲಿ ಶಾಲೆ,ಕಾಲೇಜುಗಳಲ್ಲಿ ನಿರಂತರ ಕನ್ನಡದ ಕಾರ್ಯಕ್ರಮಗಳು ಜರುಗುತ್ತಿದ್ದವು. ಪುಸ್ತಕ ಬಿಡುಗಡೆ ಸೇರಿದಂತೆ ಹಲವಾರು ಸಾಹಿತ್ಯ ಕಾರ್ಯಕ್ರಮಗಳು ಜರುಗಬೇಕು. ಸಾಹಿತ್ಯ ಕ್ಷೇತ್ರದಲ್ಲಿ ವೈಯುಕ್ತಿಕ ದ್ವೇಷಗಳಿಗೆ ಅವಕಾಶ ಮಾಡಿಕೊಡದೆ ಕ್ರೀಡಾ ಮನೋಭಾವದಿಂದ ಸ್ಪರ್ಧೇ ಏರ್ಪಡಬೇಕು.

ಪ್ರಜಾಪ್ರಭುತ್ವ ರೀತಿಯಲ್ಲಿ ಜನರು ಉತ್ತಮ ವ್ಯಕ್ತಿಯನ್ನು ಆರಿಸುತ್ತಾರೆ. ಆಯ್ಕೆಯ ಸಂದರ್ಭದಲ್ಲಿ ವ್ಯಕ್ತಿಯ ನಡೆ,ನುಡಿ ಹಾಗೂ ವ್ಯಕ್ತಿತ್ವವನ್ನು ವಿಮರ್ಶಿಸುವುದು ಅಗತ್ಯ. ಇಲ್ಲವಾದರೆ ಐದು ವರ್ಷಗಳ ಕಾಲ ಸಾಹಿತ್ಯ ಚಟುವಟಿಕೆಗಳಿಗೆ ಸ್ಥಗಿತಗೊಳ್ಳುವ ಅಪಾಯವಿರುತ್ತದೆ. ಸಾಹಿತ್ಯ ಪರಿಷತ್ತಿನ ಪ್ರಬುಧ್ಧ ಮತದಾರರ ಉತ್ತಮ ಆಯ್ಕೆ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದರು.

ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತಿನ ಜಿಲ್ಲಾಧ್ಯಕ್ಷ ನಾಗರಾಜ ಸಂಗಂ ಮಾತನಾಡಿ, ಜಿಲ್ಲೆಯಲ್ಲಿ ಕಸಾಪ ಚುನಾವಣೆ ಕಣ ರಂಗೇರಿದೆ.

ಕೆ.ಎಂ.ಶಿವಸ್ವಾಮಿಯವರು ರಾಷ್ಟ್ರ ಮಟ್ಟದ ವಿಜ್ಞಾನ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ. ದೇಶದ ನಾನಾ ಕಡೆಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಜಿಲ್ಲೆಯ ಉದ್ದಗಲಕ್ಕೆ ಒಂದು ವರ್ಷದಿಂದ ಓಡಾಡಿ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ. ಪತ್ರಿಕಾ ರಂಗ ಹಾಗೂ ಶಿಕ್ಷಣ ರಂಗದಲ್ಲಿ ಅನುಭವ ಗಳಿಸಿದ್ದಾರೆ. ಜಿಲ್ಲೆಯಲ್ಲಿ ಉತ್ತಮ ವಾತಾವರಣವಿದ್ದು, ಗೆಲುವು ಖಚಿತ ಎಂದು ಹೇಳಿದರು.

ಮಹಡಿ ಶಿವಮೂರ್ತಿ, ಚಂದ್ರಯ್ಯ, ಸಿದ್ದಪ್ಪ, ರಘು, ಆನಂದ್,ಸತೀಶ್,ತಿಪ್ಪೇಸ್ವಾಮಿ ಮತ್ತಿತರರಿದ್ದರು.

Share This Article
Leave a Comment

Leave a Reply

Your email address will not be published. Required fields are marked *