ಸುದ್ದಿಒನ್, ಚಿತ್ರದುರ್ಗ, (ನ.01): ಕನ್ನಡ ನಾಡು ನುಡಿಯ ಸಂಪೂರ್ಣ ಇತಿಹಾಸವನ್ನು ತಿಳಿಸುತ್ತಾ ನಮ್ಮ ಭಾಷೆಯ ಉಳಿವಿಗಾಗಿ ನಾವೆಲ್ಲರು ಸೇವೆ ಸಲ್ಲಿಸೋಣ ಎಂದು ಡಾ|| ಹೆಚ್. ಎ. ಷಣ್ಮುಖಪ್ಪರವರು ಕರೆಕೊಟ್ಟರು.
ತಾಳ್ಯದ ಅರುಣೋದಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ 66 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಳ್ಯ ಗ್ರಾಮ ಪಂಚಾಯತಿ ಅಧ್ಯಕ್ಷ ಬಸವರಾಜ್ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಷಣ್ಮುಖಪ್ಪರವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸಿದರು.
ಸಮಾರಂಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಮಂಜುನಾಥ ಬಿ ಎಸ್ ಹಾಗೂ ಬೋಧಕ-ಬೋಧಕೇತರ ಸಿಬ್ಬದಿ ಮತ್ತು ಪೋಷಕರು ಹಾಜರಿದ್ದರು.