ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 13 : ತಾಲ್ಲೂಕಿನ ಭರಮಸಾಗರ ಪೊಲೀಸರು ನಕಲಿ ಬಂಗಾರ ನಾಣ್ಯಗಳನ್ನು ಮಾರಾಟ ಮಾಡಿದ ಅರೋಪದ ಮೇಲೆ ಆರೋಪಿಯೊಬ್ಬನನ್ನು ಬಂಧಿಸಿ, ಅವರಿಂದ 5 ಲಕ್ಷ ರೂ ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸಂತೆಬೆನ್ನೂರು ಸಮೀಪದ ಚಿಕ್ಕಕಬ್ಬಿಗೆರೆ ಗ್ರಾಮದ ಸುರೇಶ ಮತ್ತು ಕೃಷ್ಣಪ್ಪ ಎಂದು ಗುರುತಿಸಲಾಗಿದೆ.
ಘಟನೆ ವಿವರ : ಬೆಂಗಳೂರು ವಾಸಿಯಾದ ಅಭಿಷೇಕ ಎನ್ನುವವರಿಗೆ ಆರೋಪಿ ಸುರೇಶ್ ಪೋನ್ ಮಾಡಿ ನಮ್ಮಜ್ಜನ ಮನೆಯ ಪಾಯ ತೆಗೆಯುವಾಗ ಪುರಾತನ ಕಾಲದ ಚಿನ್ನ ಸಿಕ್ಕಿದೆ. ಕಡಿಮೆ ರೇಟ್ ಗೆ ಕೊಡುತ್ತೇವೆ ಬೇಕಿದ್ದರೆ ಬಂದು ತೆಗೆದುಕೊಂಡು ಹೋಗಿ ಎಂದು ನಂಬಿಸಿ ಅವರನ್ನು ಫೆಬ್ರವರಿ 22 ರಂದು ಸಿರಿಗೆರೆ ಸರ್ಕಲ್ ಬಳಿ ಕರೆಸಿ ಒಂದು ಚೀಲವನ್ನು ತೋರಿಸಿ ಇದರಲ್ಲಿ ಬಂಗಾರದ ಬಿಲ್ಲೆಗಳು ಇವೆ ಎಂದು ಹೇಳಿ ಒಂದು ಅಸಲಿ ಬಂಗಾರದ ನಾಣ್ಯವನ್ನು ನೀಡಿ ನಂತರ ನಮ್ಮ ಬಳಿ 04 ಕೆ.ಜಿ. ಬಂಗಾರದ ಬಿಲ್ಲೆಗಳು ಇವೆ ಅರ್ಧ ಕೆ.ಜಿ. ಮಾತ್ರ ಕೊಡುತ್ತೇವೆ ನಮ್ಮ ಮಗಳ ಮದುವೆಗೆ
ಅಜೇಂಟ್ ಹಣ ಬೇಕು ಆಗಾಗಿ ಕಡಿಮೆ ಮೊತ್ತಕ್ಕೆ ಕೊಡುತ್ತೇವೆ ಎಂತಾ ಹೇಳಿ ನಂಬಿಸಿ ಫೆಬ್ರವರಿ 28 ರಂದು ಲಕ್ಷ್ಮೀಸಾಗರ ಗ್ರಾಮದ ಬಳಿ ಸುಮಾರು 300 ರಿಂದ 400 ಗ್ರಾಂ. ನಕಲಿ ಬಂಗಾರದ ನಾಣ್ಯಗಳನ್ನು ಅವರಿಗೆ ನೀಡಿ ಅವರಿಂದ
10,50,000/- ಪಡೆದುಕೊಂಡು ಮೋಸ ಮಾಡಿರುತ್ತಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ವಂಚನೆಗೆ ಒಳಗಾದ ಬೆಂಗಳೂರು ಮೂಲದ ಅಭಿಷೇಕ್ ಭರಮಸಾಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಈ ದೂರಿನ ಮೇರೆಗೆ ಎಸ್.ಪಿ ರಂಜಿತ್ ಕುಮಾರ್ ಬಂಡಾರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಶಿವಕುಮಾರ್. ಕೆ.ಎಸ್.ಪಿ.ಎಸ್, ಹಾಗೂ ಪೊಲೀಸ್ ಉಪಾಧೀಕ್ಷಕರವರಾದ ಅರುಣ್ ನಾಗೇಗೌಡ, ರವರ ಮಾರ್ಗದರ್ಶನದಲ್ಲಿ ಭರಮಸಾಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರವರಾದ ಪ್ರಸಾದ್. ಪಿ. ರವರ ನೇತೃತ್ವದಲ್ಲಿ ಮತ್ತು ಸಿಬ್ಬಂದಿಯವರಾದ ರಂಗನಾಥ ಕುಮಾರ್. ಎ.ಎಸ್.ಐ, ರಾಘವೇಂದ್ರ. ಎ.ಎಎಸ್.ಐ, ಅಣ್ಣಪ್ಪ, ಬಿ.ಹೆಚ್, ತಿಪ್ಪೇಶ, ಹೆಚ್.ಎಂ. ಸಿದ್ದೆಶ,
ರವರ ತಂಡ ರಚಿಸಿದ್ದು ಆರೋಪಿತರ ಪತ್ತೆಯ ಬಗ್ಗೆ ಮಾಹಿತಿ ಸಂಗ್ರಹಿಸಿ ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದಾರೆ.
ಭರಮಸಾಗರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬದಿಯವರ ಪತ್ತೆ ಕಾರ್ಯವನ್ನು ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡಾರು, ಪ್ರಶಂಶಿಸಿರುತ್ತಾರೆ






