ರಾಮನಗರದ ಕಬ್ಬಾಳು ದೇವಸ್ಥಾನದಲ್ಲಿ ಭಕ್ತರ ತಲೆಬುರುಡೆ ಬಿಚ್ಚಿದ ಸೆಕ್ಯೂರಿಟಿ..!

suddionenews
1 Min Read

ರಾಮನಗರ: ಕಬ್ಬಾಳು ದೇವಸ್ಥಾನದಲ್ಲಿ ಅಲ್ಲಿನ ಸೆಕ್ಯೂರಿಟಿ ಭಕ್ತರೊಬ್ಬರ ತಲೆ ಹೊಡೆದಿರುವ ಘಟನೆ ನಡೆದಿದೆ. ಬೀಗದ ಕೀನಲ್ಲಿಯೇ ತಲೆಗೆ ಹೊಡೆದಿದ್ದಾರೆ. ಕನಕಪುರ ತಾಲೂಕಿನ ರಾಮನಗರ್ ಕಬ್ಬಾಳು ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಸೆಕ್ಯೂರಿಟಿಯಾಗಿದ್ದ ನಾಗರಾಜ್ ಭಕ್ತರ ಮೇಲೆ ಹಲಗಲೆ ನಡೆಸಿದ್ದಾರೆ.

ದೇವಸ್ಥಾನಗಳಲ್ಲಿ ಕಳೆದ ಕೆಲ ವರ್ಷಗಳಿಂದ ವಿಐಪಿ, ವಿವಿಐಪಿ, ಹಣ ನೀಡಿ ದರ್ಶನ ಪಡೆಯುವುದು ಹೀಗೆ ನಾನಾ ರೀತಿಯ ಕ್ಯೂಗಳು ಇರುತ್ತವೆ. ವಿಐಪಿ ಕ್ಯೂನಲ್ಲಿ ಹೋಗಬೇಕೆಂದರೆ ಅದಕ್ಕೆಂದೇ ಅನುಮತಿ ಕೂಡ ಬೇಕಾಗಿರುತ್ತದೆ. ಕಬ್ಬಾಳಮ್ಮ ದೇವಸ್ಥಾನದಲ್ಲಿ ಅದೇ ವಿಚಾರಕ್ಕೆ ಜಗಳ ನಡೆದು, ಭಕ್ತನ ಬುರುಡೆಯನ್ನೇ ಬಿಚ್ಚಿದ್ದಾನೆ.

ವಿಐಪಿ ಗೇಟಿನಲ್ಲಿ ಬಂದವರ ಮೇಲೆ ಸೆಕ್ಯೂರಿಟಿ ಹಲ್ಲೆ ನಡೆಸಿದ್ದಾರೆ. ಇದರಿಂದ ಮಹೇಶ್ ಎಂಬುವವರ ತಲೆಗೆ ಜೋರು ಪೆಟ್ಟಾಗಿದೆ. ರಕ್ತ ಚಿಮ್ಮಿ ಬಂದಿದೆ. ತಕ್ಷಣ ಮಹೇಶ್ ಎಂಬ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಬಂದ ಆಡಳಿತ ಮಂಡಳಿ ಹಾಗೂ ಇಓ, ಪರಿಶೀಲನೆ ನಡೆಸಿದ್ದಾರೆ. ದೇವರ ದರ್ಶನ ಪಡೆಯುವ ವಿಚಾರದಲ್ಲಿ ಘಟನೆ ವಿಕೋಪಕ್ಕೆ ತಿರುಗಿದೆ. ಈ ಪ್ರಕರಣ ಸಂಬಂಧ ಸದ್ಯ ಸಾತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ರಕ್ತವನ್ನು ನೋಡಿದ ಇತರೆ ಭಕ್ತರು ಗಾಬರಿಯಾಗಿದ್ದಾರೆ. ಹಲ್ಲೆ ಮಾಡಿದ ಸೆಕ್ಯುರಿಟಿ ಮೇಲೆ ಕ್ರಮ ಆಗಬೇಕು, ನನಗೆ ನ್ಯಾಯ ಸಿಗಬೇಕು ಎಂದು ದೇವಾಲಯದ ಒಳಗೆ ಭಕ್ತ ಮಹೇಶ್ ಕೂತಿದ್ದರು. ಆದರೆ ಸೆಕ್ಯುರಿಟಿ ಮೇಲೆ‌ ಕ್ರಮ ಕೈಗೊಳ್ಳುವುದಾಗಿ ದೇವಾಲಯದ ಇಓ ತಿಳಿಸಿದ್ದಾರೆ. ಸದ್ಯ ದೇವಸ್ಥಾನದಲ್ಲಿ ವಾತಾವರಣ ಸಹಜ ಸ್ಥಿತಿಯತ್ತ ಸಾಗಿದೆ. ಸೆಕ್ಯುರಿಟಿ ಸಮಾಧಾನವಾಗಿ ಹೇಳದೆ ಕೋಪಕ್ಕೆ, ಜಗಳಕ್ಕೆ ಮುಂದಾಗಿ ಇಂಥದ್ದೊಂದು ಘಟನೆ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *