ಚಿತ್ರದುರ್ಗ, (ಮೇ.24) : ಕರ್ನಾಟಕ ಕೃಷಿ ಉತ್ಪನ್ನಗಳ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ 1966ರ ಪ್ರಕಾರ ಜಿಲ್ಲಾಧಿಕಾರಿ ಕವಿತಾ ಎಸ್, ಮನ್ನಿಕೇರಿ ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣಾ ಮತಕ್ಷೇತ್ರಗಳನ್ನು ವಿಂಗಡಿಸಿ ಮೀಸಲಾತಿ ಸ್ಥಾನಗಳನ್ನು ನಿಗದಿಪಡಿಸಿದ್ದಾರೆ.
ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯ ನಾಯಕನಹಟ್ಟಿ, ನೇರಲಗುಂಟೆ, ಹಿರೇಹಳ್ಳಿ, ತಳಕು, ಜಾಜೂರು ಕ್ಷೇತ್ರಗಳಿಗೆ ಸಾಮಾನ್ಯ ವರ್ಗಕ್ಕೆ, ಮೈಲನಹಳ್ಳಿ, ಬೆಳಗೆರೆ ಕ್ಷೇತ್ರಗಳಲ್ಲಿ ಮಹಿಳೆಯರಿಗೆ, ದೊಡ್ಡೇರಿ ಕ್ಷೇತ್ರದಲ್ಲಿ ಹಿಂದುಳಿದ(ಬ) ವರ್ಗ, ಪರಶುರಾಂಪುರ ಕ್ಷೇತ್ರದಲ್ಲಿ ಹಿಂದುಳಿದ(ಅ)ವರ್ಗ, ಚಳ್ಳಕೆರೆ ಕ್ಷೇತ್ರದಲ್ಲಿ ಪರಿಶಿಷ್ಟ ಪಂಗಡಕ್ಕೆ ಮತ್ತು ಸಾಣೆಕೆರೆ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾತಿ ಕಲ್ಪಿಸಲಾಗಿದೆ.
ಮೊಳಕಾಲ್ಮೂರು ತಾಲ್ಲೂಕು ವ್ಯಾಪ್ತಿಯ ರಾಂಪುರ, ದೇವಸಮುದ್ರ, ಸಿದ್ದಾಪುರ, ಕೋನಸಾಗರ, ಬೊಮ್ಮಗೊಂಡನಕೆರೆ ಕ್ಷೇತ್ರಗಳಲ್ಲಿ ಸಾಮಾನ್ಯ ವರ್ಗಕ್ಕೆ, ತಮ್ಮೇನಹಳ್ಳಿ, ಜಾಹಂಗೀರ್ ಬುಡ್ಡೇನಹಳ್ಳಿ ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗಕ್ಕೆ, ನಾಗಸಮುದ್ರ ಅನುಸೂಚಿತ ಜಾತಿ, ತುಮಕೂರ್ಲಹಳ್ಳಿ ಅನುಸೂಚಿತ ಪಂಗಡಕ್ಕೆ ಹಾಗೂ ಹಾನಗಲ್ ಮತ್ತು ಮೊಳಕಾಲ್ಮೂರು ಕ್ಷೇತ್ರಗಳಲ್ಲಿ ಮಹಿಳೆಯರಿಗೆ, ಕೃಷಿ ಉತ್ಪನ್ನ ಮಾರುಕಟ್ಟೆ ವರ್ತಕರ ಕ್ಷೇತ್ರ, ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳ ಕ್ಷೇತ್ರಕ್ಕೆ ಸಾಮಾನ್ಯ ವರ್ಗ ಮೀಸಲಾತಿ ಕಲ್ಪಿಸಲಾಗಿದೆ.