ಬೆಂಗಳೂರು: ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ, ಬೃಹತ್ ಪಂಥ ಸಂಚಲನ ನಡೆಸಲು ಕಾಂಗ್ರೆಸ್ ನಿರ್ಧಾರ ಮಾಡಿದೆ. ಈ ಸಂಬಂಧ ಇಂದು ಕೆಪಿಸಿಸಿ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದೆ. ಕಾರ್ಯಕ್ರಮದ ರೂಪರೇಷೆ ಸಿದ್ದಪಡಿಸಲು ಡಿಕೆಶಿ, ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆದಿದೆ.
ವಿನೂತನವಾಗಿ ಕಾರ್ಯಕ್ರಮ ಹಮ್ಮಿಕೊಳುವಂತೆ ಎಲ್ಲಾ ರಾಜ್ಯಗಳ ಪಿಸಿಸಿಗಳಿಗೆ ಸೂಚನೆ ಹಿನ್ನೆಲೆಯಲ್ಲಿ, ಎಐಸಿಸಿ ಸೂಚನೆಯಂತೆ ರಾಜ್ಯದಲ್ಲೂ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲು ಬರದ ಸಿದ್ಧತೆ ನಡೆಯುತ್ತಿದೆ. ದಂಡಿ ಸತ್ಯಾಗ್ರಹದ ಮಾದರಿಯಲ್ಲಿ ರಾಜ್ಯ ಕಾಂಗ್ರೆಸ್ ನಿಂದ ಪಂಥ ಸಂಚಲನ ಮಾಡಲಿದೆ.
1 ಲಕ್ಷ ಕಾರ್ಯಕರ್ತರಿಂದ ಪಂಥ ಸಂಚಲನ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕೆಪಿಸಿಸಿ ಕಚೇರಿಯಿಂದ ಫ್ರೀಡಂ ಪಾರ್ಕ್ ವರೆಗೆ ಕಾಲ್ನಡಿಗೆ ನಡೆಸಲು ಚಿಂತನೆ? ಇದೆ ಎನ್ನಲಾಗುತ್ತಿದೆ. ಅಂದು ಎಲ್ಲರು ಶ್ವೇತ ವರ್ಣದ ಧಿರಿಸು ಧರಿಸಿ ಪಥಸಂಚಲನದ ಮೂಲಕ ಜನರ ಗಮನ ಸೆಳೆಯಲು ಪ್ಲಾನ್ ಹಾಕಿಕೊಂಡಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ.