ದ್ವಿತೀಯ ಪಿಯುಸಿಯಲ್ಲಿ ಮಹೇಶ್ ಪಿ.ಯು ಕಾಲೇಜಿಗೆ ಉತ್ತಮ ಫಲಿತಾಂಶ ‌

1 Min Read

 

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.10 : ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ(ರಿ), ಮಹೇಶ್ ಪಿ.ಯು ಕಾಲೇಜು, ಚಿತ್ರದುರ್ಗ ಉತ್ತಮ ಫಲಿತಾಂಶವನ್ನು ಪಡೆದುಕೊಂಡಿದೆ.

ಸಿದ್ದೇಶ್ ಎನ್ 583 ಅಂಕಗಳನ್ನು ಪಡೆಯುವ ಮೂಲಕ ರಾಸಾಯನ ಶಾಸ್ತ್ರ ಮತ್ತು ಬೌತಶಾಸ್ತ್ರ ವಿಷಯದಲ್ಲಿ 100 ಕ್ಕೆ 100 ಅಂಕಗಳನ್ನು ಪಡೆದು ಕಾಲೇಜಿನಗೆ ಪ್ರಥಮ ಸ್ಥಾನ ಹಾಗೂ ಜಿಲ್ಲೆಗೆ 4ನೇ ಸ್ಥಾನವನ್ನು ತಂದಿರುವುದಲ್ಲದೇ ಜನವರಿಯಲ್ಲಿ ನಡೆದ ಎಇಇ ಪರೀಕ್ಷೆಯಲ್ಲಿ 93.26 ಪರ್ಸಂಟೈಲ್ ಪಡೆಯುವುದರ ಮೂಲಕ ಉತ್ತಮ ಫಲಿತಾಂಶ ತೆಗೆದುಕೊಂಡಿರುತ್ತಾರೆ.

ಮತ್ತು ಪುನೀತ್ ಎಮ್ 577 ಅಂಕಗಳನ್ನು ಪಡೆಯುವ ಮೂಲಕ ರಾಸಾಯನ & ಗಣಿತ ವಿಷಯದಲ್ಲಿ 100 ಕ್ಕೆ 100 ಅಂಕಗಳನ್ನು ಪಡೆದಿರುತ್ತಾರೆ ಮತ್ತು ವರ್ಷಿತ ಎಮ್. ಎ 577 ಅಂಕಗಳನ್ನು ಪಡೆಯುವ ಮೂಲಕ ಗಣಕ ವಿಜಾÐನ ವಿಷಯದಲ್ಲಿ 100 ಕ್ಕೆ 100 ಅಂಕಗಳನ್ನು ಪಡೆದು ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಈ ಶೈಕ್ಷಣಿಕ ಸಾಲಿನಲ್ಲಿ ಒಟ್ಟು 154 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಒಟ್ಟು 36 ಡಿಸ್ಟಂಗ್ಷನ್, 84 ಪ್ರಥಮ ಸ್ಥಾನ, 15 ದ್ವಿತೀಯ ಸ್ಥಾನ ಮತ್ತು 15 ವಿದ್ಯಾರ್ಥಿಗಳು ಜಸ್ಟ್ ಪಾಸ್ ಆಗಿರುತ್ತಾರೆ. ಒಟ್ಟು ಕಾಲೇಜಿನ ಫಲಿತಾಂಶವು 97.4% ಯಲ್ಲಿ ಉತ್ತಮ ಫಲಿತಾಂಶ ಬಂದಿರುತ್ತದೆ.

ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಹೇಶ್ ಪದವಿ ಪೂರ್ವ ಕಾಲೇಜು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ವಿದ್ಯಾಭ್ಯಾಸವನ್ನು ನೀಡುವುದರ ಮೂಲಕ ಕಲಿಕಾ ಪ್ರೋತ್ಸಾಹವನ್ನು ನೀಡುತ್ತದೆ. ಈ ಮಕ್ಕ್ಳ ಸಾಧನೆಗೆ ಎಲ್ಲಾ ಸಬ್ಬಂದಿ ವರ್ಗದವರ ಪ್ರೋತ್ಸಾಹ ಮತ್ತು ತರಬೇತಿಯಿಂದ ಈ ಸಾಧನೆಯೇ ಕಾರಣ.

ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿಯವರಾದ ವಿಜಯಕುಮಾರ್ ಬಿ, ಕಾರ್ಯದರ್ಶಿಗಳು, ಮತ್ತು ಪೃಥ್ವೀಷ ಎಸ್.ಎಮ್, ನಿರ್ದೇಕರು, ಮತ್ತು ಶ್ರೀ. ಕೆಂಚನಗೌಡ ಎಸ್.ಜೆ, ಪ್ರಾಂಶುಪಾಲರು ಹಾಗೂ ಎಲ್ಲಾ ಸಿಬ್ಬಂದಿವರ್ಗದವರು ಶುಭಕೋರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *