ಉಕ್ರೇನ್ VS ರಷ್ಯಾ ಯುದ್ಧ : ಕೆಲವೇ ಗಂಟೆಗಳಲ್ಲಿ ……..?

 

 

ಉಕ್ರೇನ್ ಮೇಲೆ ರಷ್ಯಾ ಯುದ್ಧ ಆರಂಭಿಸಿ ಎಂಟು ದಿನಗಳಾಗಿವೆ. ಈ ಯುದ್ದದಿಂದಾಗಿ ಉಕ್ರೇನ್‌ಗೆ ಭಾರಿ ನಷ್ಟವಾಗಿದೆ. ಇಷ್ಟೇ ಅಲ್ಲದೇ ರಷ್ಯಾದ ಮೇಲೂ ಯುದ್ಧದ ಪ್ರಭಾವ ಪ್ರತಿಕೂಲವಾದ ಪರಿಣಾಮ ಬೀರಿದೆ. ಸಮಸ್ಯೆಗೆ ಪರಿಹಾರದತ್ತ ಸಾಗುವಂತೆ ಜಗತ್ತಿನ ರಾಷ್ಟ್ರಗಳು ಈ ಎರಡು ದೇಶಗಳಿಗೆ ಹೇಳುತ್ತಿವೆ.

ಆದರೆ ರಷ್ಯಾ ಮತ್ತು ಉಕ್ರೇನ್ ತಮ್ಮದೇ ಸರಿ ಎನ್ನುವಂತೆ ತಾವು ಹೇಳಿದಂತೆ ನಡೆಯಬೇಕು ಎಂಬಂತಿದೆ ಉಭಯ ರಾಷ್ಟ್ರಗಳ ನಿಲುವು. ಇತ್ತೀಚಿನ ಮಾಹಿತಿಯ ಪ್ರಕಾರ, ಉಕ್ರೇನ್ ಮತ್ತು ರಷ್ಯಾ ನಡುವೆ ಕೆಲವೇ ಗಂಟೆಗಳಲ್ಲಿ ಎರಡನೇ ಸುತ್ತಿನ ಮಾತುಕತೆ ನಡೆಯಲಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.

ಮಾತುಕತೆಯೇ ಬೇರೆ ಯುದ್ದವೇ ಬೇರೆ ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ಹೇಳಿದೆ. ನಮ್ಮ ಬೇಡಿಕೆಗಳನ್ನು ಮೊದಲೇ ಹೇಳಿದ್ದೇವೆ. ಅವುಗಳಿಗೆ ಒಪ್ಪಿದರೆ ಮಾತ್ರ ಯುದ್ಧ ಮುಗಿಯುತ್ತದೆ ಎಂದು ರಷ್ಯಾ ಸ್ಪಷ್ಟಪಡಿಸಿದೆ.

ರಷ್ಯಾ ಸೇನೆ ಡೊನೊಸ್ಕ್ ಮತ್ತು ಲುನಿಸ್ಕ್ ತೊರೆಯಬೇಕು ಎಂದು ಉಕ್ರೇನ್ ಪಟ್ಟು ಹಿಡಿದಿದೆ. ಉಕ್ರೇನಿಯನ್ ನಿಯೋಗವು ಪ್ರಸ್ತುತ ಎರಡನೇ ಸುತ್ತಿನ ಮಾತುಕತೆಗಾಗಿ ಬೆಲಾರಸ್‌ನಲ್ಲಿದೆ.

ಫೆಬ್ರವರಿ 28 ರಂದು, ರಷ್ಯಾ ಬೆಲಾರಸ್‌ನಲ್ಲಿ ಉಕ್ರೇನ್‌ನೊಂದಿಗೆ ಸುಮಾರು 4 ಗಂಟೆಗಳ ಕಾಲ ಸಂಧಾನ ಮಾತುಕತೆ ನಡೆಸಿತು. ಆದರೆ, ಉಭಯ ರಾಷ್ಟ್ರಗಳ ನಡುವಿನ ಹಗ್ಗಜಗ್ಗಾಟದಿಂದಾಗಿ ಮಾತುಕತೆ ವಿಫಲವಾಗಿತ್ತು. ಇಂದು (ಗುರುವಾರ) ನಡೆಯಲಿರುವ ಮಾತುಕತೆ ಯಶಸ್ವಿಯಾಗಿ ಯುದ್ದ ನಿಲ್ಲಲಿ ಶಾಂತಿ ನೆಲಸಲಿ ಎಂದು ಉಭಯ ದೇಶಗಳಷ್ಟೇ ಅಲ್ಲದೇ ವಿಶ್ವದ ಎಲ್ಲಾ ರಾಷ್ಟ್ರಗಳ ಜನತೆ ಬಯಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *