ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಈ ಬಾರಿಯೂ ಉಡುಪಿ ಮೊದಲ ಸ್ಥಾನ ಪಡೆದಿದ್ದರೆ, ಯಾದಗಿರಿ ಕೊನೆಯ ಸ್ಥಾನ ಪಡೆದಿದೆ. ಉಡುಪಿ ಜಿಲ್ಲೆಗೆ 93.90 ರಷ್ಟು ಫಲಿತಾಂಶ ಬಂದಿದೆ. ಎರಡನೇ ಸ್ಥಾನದಲ್ಲಿ ದಕ್ಷಿಣ ಕನ್ನಡ ಇದ್ದು, 93.57ರಷ್ಟು ಫಲಿತಾಂಶ ಬಂದಿದೆ. ಕೊನೆಯ ಸ್ಥಾನದಲ್ಲಿರುವ ಯಾದಗಿರಿ 48.45ರಷ್ಟು ಫಲಿತಾಂಶ ಬಂದಿದೆ.

ಧಾರವಾಡ ಶೇಕಡ 72.32, ದಾವಣಗೆರೆ ಶೇಕಡ 69.45, ತುಮಕೂರು ಶೇಕಡ 72.02 ಫಲಿತಾಂಶ ಬಂದಿದೆ. ಹಾಜರಾದ ವಿದ್ಯಾರ್ಥಿಗಳಲ್ಲಿ ಶೇಕಡ 50 ರಷ್ಟು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇಕಡ 53.29ರಷ್ಟು ಫಲಿತಾಂಶ ಬಙದಿದ್ದು, ವಿಜ್ಞಾನ ವಿಭಾಗದಲ್ಲಿ ಶೇಕಡ 82.54ರಷ್ಟು ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ ಶೇಕಡ 76.07ರಷ್ಟು ಫಲಿತಾಂಶ ಬಂದಿದೆ.

ಫಲಿತಾಂಶದ ನಂತರ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರೀಕ್ಷೆ-2 ಹಾಗೂ ಪರೀಕ್ಷೆ – 3 ರ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಇದರಿಂದ ವಿದ್ಯಾರ್ಥಿಗಳಿಗೆ ಉತ್ತೀರ್ಣರಾಗಲು ಮತ್ತೊಮ್ಮೆ ಪ್ರಯತ್ನ ಮಾಡಲು ಸಹಕಾರಿಯಾಗಲಿದೆ.


