ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆ ಎಂಬುದು ವಿದ್ಯಾರ್ಥಿಗಳ ಜೀವನದ ಬಹಳ ಮುಖ್ಯವಾದ ಭಾಗ. ಈ ಪರೀಕ್ಷೆಗಾಗಿ ಹಗಲು ರಾತ್ರಿ ಕಷ್ಟಪಟ್ಟು ಓದುತ್ತಾರೆ. ಪರೀಕ್ಷೆ ಬರೆದ ಮೇಲಂತೂ ಯಾವಾಗ ಫಲಿತಾಂಶ ಬರುತ್ತೆ ಅಂತ ಕಾಯುತ್ತಿರುತ್ತಾರೆ. ಈ ಫಲಿತಾಂಶ ಅನೌನ್ಸ್ ಮಾಡುವ ದಿನಾಂಕಗಳನ್ನೇ ನಕಲಿ ಮಾಡಿದರೆ ಮಕ್ಕಳಿಗೆ ಇನ್ನೆಷ್ಟು ಟೆನ್ಶನ್ ಆಗಬೇಡ.
ಕಳೆದ ಕೆಲ ದಿನಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಒಂದು ನೋಟೀಸ್ ವೈರಲ್ ಆಗಿತ್ತು. ಅದರಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮಾರ್ಚ್ 1ರಿಂದ 23ರವರೆಗೆ ನಡೆಸಲಾಗಿತ್ತು. ಎಲ್ಲಾ ಉತ್ತರ ಪತ್ರಿಕೆಗಳ ಮೌಲ್ಯ ಮಾಪನವೂ ಪೂರ್ಣಗೊಂಡಿದೆ. ಪರೀಕ್ಷೆಯ ಫಲಿತಾಂಶವನ್ನು ಏಪ್ರಿಲ್ 3ರಂದು ಬೆಳಗ್ಗೆ 10 ಗಂಟೆಗೆ ಪ್ರಕಟ ಮಾಡಲಿದ್ದಾರೆ ಎಂದು ವೆಬ್ಸೈಟ್ ಕೂಡ ಮೆನ್ಶನ್ ಮಾಡಲಾಗಿತ್ತು. ಆದರೆ ನಕಲಿ ನೋಟೀಸ್ ಎಂಬುದನ್ನು ಶಿಕ್ಷಣ ಇಲಾಖೆ ಖಚಿತ ಪಡಿಸಿದೆ.
KSEAB ಮೌಲ್ಯಮಾಪನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಮತ್ತು ಫಲಿತಾಂಶವನ್ನು ಪ್ರಕಟ ಮಾಡಲು ಇನ್ನು ಯಾವುದೇ ದಿನಾಂಕವನ್ನು ಪ್ರಕಟ ಮಾಡಿಲ್ಲ. ಮೂಲಗಳ ಪ್ರಕಾರ ಲೋಕಸಭಾ ಚುನಾವಣೆಗೂ ಮುನ್ನವೇ ಫಲಿತಾಂಶವನ್ನು ಅನೌನ್ಸ್ ಮಾಡಲಿದೆ. ಇನ್ನು ಈ ಸಂಬಂಧ ಯಾವುದೇ ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ. ಇನ್ನು ವಿಜ್ಞಾನ, ಕಲೆ, ವಾಣಿಜ್ಯ ಮೂರು ವುಭಾಗದ ಫಲಿತಾಂಶವನ್ನು ಒಂದೇ ದಿನವೇ ಬಿಡುಗಡೆ ಮಾಡಲು ತೀರ್ಮಾನಿಸಿದೆ. ಆದರೆ ಅಧಿಕೃತ ದಿನಾಂಕವನ್ನು ನಿಗದಿ ಮಾಡಿಲ್ಲ. ಫಲಿತಾಂಶವನ್ನು kseab.Karnataka.gov.in ಮತ್ತು karresults.in ನಲ್ಲೂ ನೋಡಬಹುದಾಗಿದೆ. ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆಯನ್ನು ಈ ವೆಬ್ಸೈಟ್ ನಲ್ಲಿ ನೋಂದಾಯಿಸಿ ಫಲಿತಾಂಶ ನೋಡಬಹುದು. ಕಾಲೇಜುಗಳಲ್ಲೂ ಫಲಿತಾಂಶ ಪ್ರಕಟ ಮಾಡಲಿದ್ದಾರೆ.