ಬೆಂಗಳೂರು: ಎಲ್ಲವೂ ಅಂದುಕೊಂಡಂತೆ ರೆಡಿಯಾಗಿದ್ದರೆ ನಿನ್ನೆಯೇ ದ್ವಿತೀಯ ಪಿಯುಸಿ ಫಲಿತಾಂಶ ಬಂದು ವಿದ್ಯಾರ್ಥಿಗಳೆಲ್ಲಾ ಮುಂದಿನ ಭವಿಷ್ಯದ ಬಗ್ಗೆ ಆಲೋಚನೆ ಮಾಡ್ತಾ ಇದ್ದರು. ಆದರೆ ಆ ರೀತಿ ಆಗ್ಲಿಲ್ಲ ಯಾವುದೋ ತಾಂತ್ರಿಕ ಕಾರಣದಿಂದಾಗಿ. ನಾಳೆ ಅಧಿಕೃತವಾಗಿ ಫಲಿತಾಂಶ ಪ್ರಕಟವಾಗ್ತಾ ಇದೆ. ನಾಳೆ ಮಧ್ಯಾಹ್ನ 3 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧಿಕೃತ ವೆಬ್ಸೈಟ್ ನಲ್ಲಿ ಫಲಿತಾಂಶ ವನ್ನು ಅಪ್ಲೋಡ್ ಮಾಡಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ಅಂಕಗಳನ್ನು ವೀಕ್ಷಿಸಬಹುದು.
ಸಹಜವಾಗಿ ಬೆಳಗ್ಗೆಯೇ ಫಲಿತಾಂಶವನ್ನ ಪ್ರಕಟ ಮಾಡ್ತಾ ಇದ್ರು. ಆದರೆ ಈ ಬಾರಿ ಮಧ್ಯಾಹ್ನದ ವೇಳೆ ಫಲಿತಾಂಶ ಪ್ರಕಟವಾಗಲಿದ್ದು, ಸಂಜೆ 6.15ಕ್ಕೆ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿ ನಡೆಸಲಿದ್ದಾರೆ. ವಿದ್ಯಾರ್ಥಿಗಳು ಫಲಿತಾಂಶವನ್ನ karresults.nic.in ಗೆ ಭೇಟಿ ನೀಡಿ, ನೋಡಬಹುದು. ಎಲ್ಲಾ ವಿದ್ಯಾರ್ಥಿಗಳಿಗೆ ಪೋಷಕರಿಗೆ ಆತಂಕ, ಕುತೂಹಲ ಒಟ್ಟೊಟ್ಟಿಗೆ ಇರುವ ಕಾರಣ, ರಿಸಲ್ಟ್ ಬಂದ ಕೂಡಲೇ ಎಲ್ಲರೂ ಅದೇ ವೆಬ್ಸೈಟ್ ನಲ್ಲಿ ಇರ್ತಾರೆ.

ಹೀಗಾಗಿಯೇ ಸರ್ವರ್ ಬ್ಯುಸಿಯಾಗುವ ಸಾಧ್ಯತೆಯೂ ಇದೆ. ಒಂದು ವೇಳೆ ವೆಬ್ಸೈಟ್ ಬ್ಯುಸಿ ಇದ್ರೆ ‘ಕರ್ನಾಟಕ ಒನ್’ ಎಂಬ ಮೊಬೈಲ್ ಆಪ್ ಮೂಲಕವೂ ಫಲಿತಾಂಶವನ್ನ ವೀಕ್ಷಣೆ ಮಾಡಬಹುದು. ಜೊತೆಗೆ ಶಿಕ್ಷಣ ಇಲಾಖೆಯೇ ಎಸ್ಎಂಎಸ್ ಮೂಲಕ ಫಲಿತಾಂಶವನ್ನ ವಿದ್ಯಾರ್ಥಿಗಳಿಗೆ ತಲುಪಿಸುವ ಕೆಲಸ ಮಾಡುತ್ತದೆ. ನೋಂದಾಯಿತ ನಂಬರ್ ಗೆ ಫಲಿತಾಂಶವೂ ಎಸ್ಎಂಎಸ್ ಮೂಲಕ ಬರಲಿದೆ. ಈ ಬಾರಿ ಪರೀಕ್ಷೆ ಬರೆದಿರುವ ಲಕ್ಷಾಂತರ ವಿದ್ಯಾರ್ಥಿಗಳು ಕುತೂಹಲದಿಂದ ಫಲಿತಾಂಶಕ್ಕೆ ಕಾಯ್ತಿದ್ದಾರೆ.













