Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

SDA ರುದ್ರಣ್ಣ ಆತ್ಮಹತ್ಯೆ ಕೇಸ್ : ಇತ್ತ ಸಚಿವೆ PA ವಿರುದ್ಧ FIR ದಾಖಲು.. ಅತ್ತ ರುದ್ರಪ್ಪ ಹೆಂಡತಿ ಶಾಕಿಂಗ್ ಹೇಳಿಕೆ..!

Facebook
Twitter
Telegram
WhatsApp

ಬೆಳಗಾವಿ: ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರ್ ನಿಧನವೇ ರಾಜ್ಯಕ್ಕೆ ಶಾಕ್ ನೀಡಿತ್ತು. ಈಗ ಮತ್ತೊಬ್ಬ ಸರ್ಕಾರಿ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿರುವ ರಾಜ್ಯಕ್ಕೆ ಮತ್ತೆ ಆಘಾತ ನೀಡಿದೆ. SDA ನೌಕರನಾಗಿದ್ದ ರುದ್ರಪ್ಪ ಯಡವಣ್ಣ ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದು, ತನಿಖೆ ಚುರುಕುಗೊಂಡಿದೆ. ಈ ಕೇಸ್ ಸಂಬಂಧ ಈಗಾಗಲೇ ಪೊಲೀಸರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಿಎ ಸೇರಿದಂತೆ ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ. ಅತ್ತ ಎಫ್ಐಆರ್ ದಾಖಲಾಗುತ್ತಿದ್ದಂತೆ ಆರೋಪಿಗಳು ಎಸ್ಕೇಪ್ ಆಗಿದ್ದಾರೆ.

 

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತ ಸೋಮು ಸೇರಿ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬೆಳಗಾವಿ ತಹಶಿಲ್ದಾರ್ ಬಸವರಾಜ್ ನಾಗರಾಳ್, ಪಿಎ ಸೋಮು ಹಾಗೂ ಎಫ್ಡಿಸಿ ಅಶೋಕ ಕಬ್ಬಳಿಗೇರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆದರೆ ಎಫ್ಐಆರ್ ದಾಖಲಾಗುತ್ತಿದ್ದಂತೆ ಮೂವರು ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಆರೋಪಿಗಳ ಬಂಧನಕ್ಕೆ ಪೊಲೀಸರು ವಿಶೇಷ ತನಿಖೆ ರಚಿಸಿದ್ದಾರೆ.

ತಹಶಿಲ್ದಾರ್ ಕಚೇರಿಯಲ್ಲಿಯೇ ರುದ್ರಪ್ಪ ನೇಣಿಗೆ ಶರಣಾಗಿದ್ದಾರೆ. ಇದಕ್ಕೆ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ರುದ್ರಪ್ಪ ಯಡವಣ್ಣ ಪತ್ನಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಮೊನ್ನೆ ರಾತ್ರಿ ರುದ್ರಪ್ಪ ನನ್ನ ಜೊತೆಗೆ ಫೋನ್ ನಲ್ಲಿ ಮಾತಾಡಿದ್ದರು. ಟೆನ್ಶನ್ ಆಗ್ತಾ ಇದೆ, ವರ್ಗಾವಣೆ ಮಾಡಿಸಿದ್ದಾರೆ ಎಂದೆಲ್ಲ ಹೇಳುತ್ತಿದ್ದರು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ರುದ್ರಪ್ಪ ಪತ್ನಿ ಗಿರಿಜಾ ಆಕ್ರೋಶ ಹೊರ ಹಾಕಿದ್ದಾರೆ. ರುದ್ರಪ್ಪ ಅವರ ತಾಯಿ ಕೂಡ ಮಗನ ಸಾವಿಗೆ ನ್ಯಾಯಬೇಕೆಂದು ಆಗ್ರಹಿಸಿದ್ದಾರೆ. ಊಟ ಮಾಡುತ್ತಿದ್ದವನು ಫೋನ್ ಬಂದ ಕೂಡಲೇ ಹೋದ. ಆದರೆ ಮತ್ತೆ ಬದುಕಿ ಬರಲಿಲ್ಲ ಎಂದು ಕಣ್ಣೀರಿಟ್ಟಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮೂಡಾ ಕೇಸ್: ಲೋಕಾಯುಕ್ತ ವಿಚಾರಣೆಗೆ ಹಾಜರಾದ ಸಿಎಂ ಸಿದ್ದರಾಮಯ್ಯ

  ಮೈಸೂರು: ರಾಜ್ಯ ರಾಜಕೀಯದಲ್ಲಿ ಕೋಲಾಹಲವೆಬ್ಬಿಸಿದ್ದ ಮೂಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಿಎಂ ಸಿದ್ದರಾಮಯ್ಯ ಅವರು ಲೋಕಾಯುಕ್ತ ಕಚೇರಿಗೆ ಹಾಜರಾಗಿದ್ದಾರೆ‌‌. ಮೂಡಾ ಹಗರಣದಲ್ಲಿ ಒಟ್ಟು ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಅದರಲ್ಲಿ ಸಿಎಂ ಸಿದ್ದರಾಮಯ್ಯ

ಬಾಹ್ಯಾಕಾಶದಿಂದಾನೇ ಮತದಾನ ಮಾಡಲಿದ್ದಾರೆ ಸುನೀತಾ ವಿಲಿಯಮ್ಸ್..!

ದೇಶದಾದ್ಯಂತ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಗಮನ ಸೆಳೆಯುತ್ತಿದೆ. 47ನೇ ಅಧ್ಯಕ್ಷ ಯಾರಾಗ್ತಾರೆ ಎಂಬ ಕುತೂಹಲ ಮನೆ ಮಾಡಿದೆ. ಯಾಕಂದ್ರೆ ಕಮಲ ಹ್ಯಾರಿಸ್ ಹಾಗೂ ಡೊನಾಲ್ಡ್ ಟ್ರಂಪ್ ನಡುವೆ ನೆಕ್ ಟು ನೆಕ್ ಫೈಟ್ ಇದೆ.

ಚಳ್ಳಕೆರೆ | 6 ಲಕ್ಷ ಮೌಲ್ಯದ ಗಾಂಜಾ ವಶ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 06 : ಅಕ್ರಮವಾಗಿ ಗಾಂಜಾ ಸಂಗ್ರಹಿಸಿಟ್ಟಿದ್ದ ಮನೆ ಮೇಲೆ ಚಳ್ಳಕೆರೆ ಅಬಕಾರಿ ನಿರೀಕ್ಷಕ ಸಿ. ನಾಗರಾಜು

error: Content is protected !!