ಪಕ್ಷಾಂತರ ಪರ್ವ ಮಾಡೋದು ರಾಜಕಾರಣಿಗಳಿಗೆ ಕಾಮನ್. ಪಕ್ಷದಲ್ಲಿ ಸ್ಥಾನಮಾನ ಸಿಗದೆ ಇದ್ದಾಗ, ಮಾತು ನಡೆಯದೆ ಇದ್ದಾಗಲೂ ಬೇಸರ ಮಾಡಿಕೊಂಡು ಪಕ್ಷ ಬದಲಾಯಿಸುವುದು ಸಾಮಾನ್ಯ. ಅದರಲ್ಲೂ ಈಗ ಕಾಂಗ್ರೆಸ್ ಪಕ್ಷ ಸೇರುವವರ ಸಂಖ್ಯೆ ಹೆಚ್ಚಾಗ್ತಾ ಇದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ, ಬೇರೆ ಬೇರೆ ರಾಜ್ಯದಲ್ಲೂ ಕಾಂಗ್ರೆಸ್ ತನ್ನ ಪ್ರಾಬಲ್ಯ ಸಾಧಿಸುತ್ತಿದೆ. ಇದೀಗ ಜ್ಯೋತಿರಾದಿತ್ಯ ಸಿಂಧಿಯಾ ಆಪ್ತ ಬಿಜೆಪಿಯಲ್ಲಿ ಉಸಿರುಗಟ್ಟಿದ ವಾತಾವರಣವಿದೆ ಅಂತ ಕಾಂಗ್ರೆಸ್ ಸೇರಿದ್ದಾರೆ.
ಈ ವರ್ಷದ ಕೊನೆಯಲ್ಲಿ ಮಧ್ಯಪ್ರದೇಶದ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಬೆನ್ನಲ್ಲೇ ಇಂಥದ್ದೊಂದು ಬೆಳವಣಿಗೆ ನಡೆದಿದೆ. 2020ರಲ್ಲಿ ಸಮಂದರ್ ಪಾಟೀಲ್, ಜ್ಯೋತಿರಾದಿತ್ಯ ಸಿಂಧಿಯಾ ಅವರ ಜೊತೆಗೆ ಬಿಜೆಪಿ ಸೇರಿದ್ದರು. ಇದೀಗ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರಳಿದ್ದಾರೆ. ತನ್ನ ಬೆಂಬಲಿಗರ ಜೊತೆಗೆ ಬಂದು ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಸೇರಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ರಾಜೀನಾಮೆ ಪತ್ರಗಳನ್ನು ಸಲ್ಲಿಸಲು ತಮ್ಮ ಕ್ಷೇತ್ರ ಜವಾದ್‌ನಿಂದ ಭೋಪಾಲ್‌ಗೆ ಪಟೇಲ್ ಪ್ರಯಾಣಿಸಿದರು. ಈ ವೇಳೆ, ಅವರು 1200 ಕಾರುಗಳಲ್ಲಿ, 5000 ಜನರನ್ನು ಕರೆತಂದಿದ್ದರು. ಬಿಜೆಪಿಗೆ ರಾಜೀನಾಮೆ ಸಲ್ಲಿಸಿದ ಬಳಿಕ ಕಮಲ್‌ನಾಥ್ ನೇತೃತ್ವದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಈ ವೇಳೆ ಮಾತನಾಡಿದ ಸಮಂದರ್ ಪಟೇಲ್, ‘ನಾನು ಮಹಾರಾಜ್ ಅವರೊಂದಿಗೆ ಪಕ್ಷವನ್ನು ತೊರೆದಿದ್ದೆ. ಆದರೆ, ಬಿಜೆಪಿಯೊಳಗೆ ಉಸಿರುಗಟ್ಟಿದ ಅನುಭವವಾಯಿತು. ನನ್ನನ್ನು ಯಾವುದೇ ಕಾರ್ಯಕ್ರಮಗಳಿಗೆ ಆಹ್ವಾನಿಸಿಲ್ಲ. ನನಗೆ ಗೌರವ ಮತ್ತು ಅಧಿಕಾರದ ಸ್ಥಾನವನ್ನು ನೀಡಲಾಗಿಲ್ಲ’ ಎಂದು ಆರೋಪಿಸಿದ್ದಾರೆ.