ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಚಿತ್ರದುರ್ಗ. ಜ.07 : ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ಬಾಗಲೂರಿನಲ್ಲಿ ಜ.3 ಮತ್ತು 4 ರಂದು ನಡೆದ 4ನೇ ರಾಜ್ಯ ಮಟ್ಟದ ವೈಜ್ಞಾನಿಕ ಪರಿಷತ್ ಸಮ್ಮೇಳನದಲ್ಲಿ ಚಿತ್ರದುರ್ಗದ ಮೂರು ಜನರಿಗೆ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತೆಂದು ವೈಜ್ಞಾನಿಕ ಪರಿಷತ್ನ ಜಿಲ್ಲಾಧ್ಯಕ್ಷರಾದ ನಾಗರಾಜ್ ಸಂಗಮ್ ತಿಳಿಸಿದ್ದಾರೆ.
ಕರೋನ ಸಮಯದಲ್ಲಿ ಉತ್ತಮವಾದ ಸೇವೆಯನ್ನು ಮಾಡಿದ ಬಸವೇಶ್ವರ ಕಾಲೇಜು ಮತ್ತು ಆಸ್ಪತ್ರೆಯ ಅಧೀಕ್ಷಕರಾದ ಪಾಲಾಕ್ಷರವರಿಗೆ ಎಚ್.ಎನ್ಪ್ರಶಸ್ತಿಗೆ, ಈ ವರ್ಷದಿಂದ ಹೊಸದಾಗಿ ಪ್ರಾರಂಭ ಮಾಡಲಾದ ಚೈತನ್ಯಶ್ರೀ ಪ್ರಶಸ್ತಿಗೆ ಚಿತ್ರದುರ್ಗದ ವಿಶ್ವ ಮಾನವ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಸುಧಾ ಲೋಕೇಶ್ ಹಾಗೂ ಸರ್ಕಾರಿ ಶಿಕ್ಷಕರಾದ ಶ್ರೀಮತಿ ಶೋಭಾ ಮಲ್ಲಿಕಾರ್ಜನ್ರವರನ್ನು ಆಯ್ಕೆ ಮಾಡಿ ಸನ್ಮಾನಿಸಲಾಯಿತು.
ಕಳೆದ ಮೂರು ವರ್ಷದಿಂದ ಎಚ್.ಎನ್. ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಇದರಲ್ಲಿ ಚಿತ್ರದುರ್ಗದ ಕೊಳಗೇರಿ ನಿರ್ಮೂಲನಾ ಸಂಸ್ಥೆಯ ಗಣೇಶ್, ಪರಿಸರವಾದಿ ಎಚ್.ಎಸ್.ಎನ್. ಸ್ವಾಮಿ ಹಾಗೂ ವಿಜ್ಞಾನ ಶಿಕ್ಷಕರಾದ ಡಾ.ವಿ.ಮೋಹನ್ ಕುಮಾರ್ ಪವಾಡ ಗುಟ್ಟುಗಳನ್ನು ಬಯಲು ಮಾಡುವ ಹಿನ್ನಲೆಯಲ್ಲಿ ಇವರಿಗೆ ನೀಡಲಾಗಿತ್ತು.
ಪ್ರಶಸ್ತಿಗಳನ್ನು ಸಮ್ಮೇಳನಾಧ್ಯಕ್ಷರಾದ ಶ್ರೀಮತಿ ಉಮಾಶ್ರೀ, ಇಸ್ರೋದ ಮಾಜಿ ಅಧ್ಯಕ್ಷರಾದ ಕಿರಣ್ ಕುಮಾರ್ ಹಾಗೂ ವೈಜ್ಞಾನಿಕ ಪರಿಷತ್ನ ಸಂಸ್ಥಾಪಕರಾದ ಹುಲಿಕಲು ನಟರಾಜ್ ಪ್ರಧಾನ ಮಾಡಿದರು. ಇದೇ ಸಂದರ್ಭದಲ್ಲಿ ಉತ್ತಮ ಸೇವಾ ಪ್ರಶಸ್ತಿಯನ್ನು ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ನಾಗರಾಜ್ ಸಂಗಮ್ ರವರಿಗೆ ನೀಡಲಾಯಿತು.