ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ,(ಅ.29): ಸಮಾಜದ ಅಭಿವೃದ್ದಿಗೆ ವಿಜ್ಞಾನ ಕಲಿಕೆ ಮುಖ್ಯ ಎಂದು ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರು ಹಾಗೂ ಪದನಿಮಿತ್ತ ಜಂಟಿ ನಿರ್ದೇಶಕ ಎಚ್.ಮಂಜುನಾಥ್ ತಿಳಿಸಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕರ್ನಾಟಕ ಸರ್ಕಾರ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ. ಕರಾವಿಪ. ಜಿಲ್ಲಾ ಸಮಿತಿ ವತಿಯಿಂದ ವಿದ್ಯಾವಿಕಾಸ ವಿದ್ಯಾಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ಜನವಿಜ್ಞಾನ ಚಳುವಳಿ ತರಬೇತಿ ಕಾರ್ಯಾಗಾರ ಉದ್ಗಾಟಿಸಿ ಮಾತನಾಡಿದರು.
ಎಲ್ಲರ ಜೀವನದಲ್ಲಿಯೂ ವಿಜ್ಞಾನ ಹಾಸುಹೊಕ್ಕಾಗಿದೆ. ಯಾವ ವಿಷಯವನ್ನು ಹೇಗೆ ಕಲಿಸಬೇಕು ಎನ್ನುವುದು ಗೊತ್ತಿದ್ದರೆ ಪ್ರಯೋಜನಕಾರಿಯಾಗುತ್ತದೆ. ಮೂಢನಂಬಿಕೆಯಿಂದ ಜನರನ್ನು ಹೊರತರಲು ವಿಜ್ಞಾನ ಪವಾಡ, ತರಬೇತಿ, ಜಾಥಗಳು ನಡೆಯುತ್ತಿರುತ್ತವೆ. ವಿಜ್ಞಾನ ಮನೋಭಾವದ ಕಲಿಕೆ ಉಪಯುಕ್ತವಾಗಬೇಕಾಗಿರುವುದರಿಂದ ತಾಂತ್ರಿಕ ಕೌಶಲ್ಯತೆ ಎಲ್ಲೆಡೆ ಹರಡಬೇಕು. ವಿಜ್ಞಾನ, ಆಧ್ಯಾತ್ಮ ಸೇರಿದಾಗ ಸಮಾಜದಲ್ಲಿ ಪರಿಣಾಮ ಬೀರಲಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸಹ ಕಾರ್ಯದರ್ಶಿ ಬಿ.ಎನ್.ಶ್ರೀನಾಥ್ ಮಾತನಾಡಿ ಜನರ ಬಳಿಗೆ ವಿಜ್ಞಾನವನ್ನು ತೆಗೆದುಕೊಂಡು ಹೋಗುವುದೇ ಜನವಿಜ್ಞಾನ ಚಳುವಳಿಯ ಉದ್ದೇಶ. ಶಿಕ್ಷಕ/ಶಿಕ್ಷಕಿ ಸರಿಯಾದ ರೀತಿಯಲ್ಲಿ ತಯಾರಾದರೆ ಸಮಾಜ ಉದ್ದಾರವಾಗುತ್ತದೆ. ಜನವಿಜ್ಞಾನ ಚಳುವಳಿಯನ್ನು ಅರ್ಥಮಾಡಿಕೊಂಡು ಮೌಢ್ಯ ದೂರ ಮಾಡಿ ಎಂದು ಬಿ.ಇ.ಡಿ.ಪ್ರಶಿಕ್ಷಣಾರ್ಥಿಗಳಿಗೆ ಕರೆ ನೀಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡುತ್ತ ಜ್ಞಾನ-ವಿಜ್ಞಾನ ಎನ್ನುವ ಪದವೇ ವಿಶೇಷವಾದುದು. ವಿಜ್ಞಾನದಲ್ಲಿ ಜ್ಞಾನವಿದೆ. ವಿದ್ಯಾವಂತರೆ ಹೆಚ್ಚು ಅಜ್ಞಾನಕ್ಕೆ ಒಳಗಾಗುತ್ತಿರುವುದು ಬೇಸರದ ಸಂಗತಿ. ಅನಕ್ಷರಸ್ಥರಿಗಿಂತ ವಿದ್ಯಾವಂತರಲ್ಲಿರುವ ಮೂಢನಂಬಿಕೆ ಹೆಚ್ಚು ಅಪಾಯಕಾರಿ. ಪದವಿ ಜೊತೆ ಸಾಮಾನ್ಯ ಜ್ಞಾನವನ್ನು ಬೆಳೆಸಿಕೊಂಡಾಗ ಮಾತ್ರ ಜೀವನದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಬಿ.ಇ.ಡಿ.ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ ಅಧ್ಯಕ್ಷ ಎಂ.ಡಿ.ಲತೀಪ್ಸಾಬ್ ಮಾತನಾಡಿ ವಿಜ್ಞಾನ-ತಂತ್ರಜ್ಞಾನ ಯುಗದಲ್ಲಿ ಅನೇಕರು ಮೂಢನಂಬಿಕೆ, ಅಂಧಶ್ರದ್ದೆಯಲ್ಲಿದ್ದಾರೆ. ಮೌಢ್ಯತೆಗೊಳಗಾಗುವವರಲ್ಲಿ ವಿದ್ಯಾವಂತರೆ ಜಾಸ್ತಿ. ಮೂಢನಂಬಿಕೆ ವಿರುದ್ದ ಜನತೆಯಲ್ಲಿ ಜಾಗೃತಿ ಮೂಡಿಸುವುದು ಜನವಿಜ್ಞಾನ ಚಳುವಳಿ ತರಬೇತಿಯ ಮೂಲ ಉದ್ದೇಶ ಎಂದು ಹೇಳಿದರು.
ಸಂಸ್ಕøತಿ ಚಿಂತಕ ಪ್ರೊ.ಜಿ.ಎನ್.ಮಲ್ಲಿಕಾರ್ಜುನಪ್ಪ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಮಾಜಿ ಉಪಾಧ್ಯಕ್ಷ ಚಳ್ಳಕೆರೆ ಯರ್ರಿಸ್ವಾಮಿ, ಕರಾವಿಪ. ಕಾರ್ಯಕಾರಿ ಸಮಿತಿ ಸದಸ್ಯ ಹೆಚ್.ಎಸ್.ಟಿ.ಸ್ವಾಮಿ ವೇದಿಕೆಯಲ್ಲಿದ್ದರು.
ಬಿ.ಎಲ್.ಜ್ಯೋತಿ ಪ್ರಾರ್ಥಿಸಿದರು. ಹೆಚ್.ಎಸ್.ಟಿ.ಸ್ವಾಮಿ ಸ್ವಾಗತಿಸಿದರು. ಮಹೇಶ್ ವಂದಿಸಿದರು. ಟಿ.ಹನುಮಂತಪ್ಪ ನಿರೂಪಿಸಿದರು.