ಬೆಂಗಳೂರು : ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿ ಮಾಡಲಾಗಿತ್ತು. ಇದೀಗ ಹಲವರ ವಿರೋಧಗಳ ನಡುವೆ ವೀಕೆಂಡ್ ಕರ್ಫ್ಯೂ ತೆರವು ಮಾಡಲಾಗಿದೆ. ಆದ್ರೆ ಶಾಲೆಗಳು ಹೇಗೆ ಎಂಬ ಪ್ರಶ್ನೆಗೆ ಸಚಿವ ನಾಗೇಶ್ ಉತ್ತರಿಸಿದ್ದು, ಜನವರಿ 29 ರವರೆಗೆ ರಜೆ ಮುಂದುವರೆಯುತ್ತೆ ಎಂದು ಹೇಳಿದ್ದಾರೆ.
ಜ.29 ರವರೆಗೆ ಬೆಂಗಳೂರಿನಲ್ಲಿ ಶಾಲೆಗಳುಗೆ ರಜೆ ನೀಡಲಾಗುತ್ತೆ. ಬಳಿಕ ಸಭೆ ಮಾಡಿ ತೀರ್ಮಾನ ಮಾಡಲಾಗುತ್ತೆ. ಬೆಂಗಳೂರು ಹೊರತು ಪಡಿಸಿದರೆ ಬೇರೆ ಜಿಲ್ಲೆಗಳಲ್ಲಿ ಪಾಸಿಟಿವಿಟಿ ರೇಟ್ ನೋಡಿಕೊಂಡು, ಶಾಲೆಗಳ ಓಪನ್ ಗೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಒಂದು ಶಾಲೆಯಲ್ಲಿ ಐದು ಮಕ್ಕಳಿಗೆ ಪಾಸಿಟಿವ್ ಬಂದ್ರೆ ಮೂರು ದಿನ ಶಾಲೆ ರಜೆ. ಇಪ್ಪತ್ತೈದು ಜನರಿಗೆ ಪಾಸಿಟಿವ್ ಬಂದ್ರೆ ಏಳು ದಿನ ರಜೆ. ಇದು ಜಿಲ್ಲಾವಾರು ಶಾಲೆಗಳಿಗೆ ಅನ್ವಯವಾಗಲಿದೆ ಎಂದು ಸಚಿವ ನಾಗೇಶ್ ತಿಳಿಸಿದ್ದಾರೆ.