ರಾಮನಗರ: ಹುಲಿಕೆರೆ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ಅಸ್ವಸ್ಥರಾಗಿದ್ದಾರೆ. ಕೆಮ್ಮು, ಹೊಟ್ಟೆನೋವು, ನೆಗಡಿಯಿಂದ ಮಕ್ಕಳು ಬಳಲುತ್ತಿದ್ದಾರೆ ಎನ್ನಲಾಗಿದೆ. 8 ಮಕ್ಕಳು ಅಸ್ವಸ್ಥರಾಗಿದ್ದಾರೆ. ಇದು ಪೋಷಕರಲ್ಲಿ ಸಹಜವಾಗಿಯೇ ಆತಂಕ ಉಂಟಾಗಿದೆ.
ಅಸ್ವಸ್ಥಗೊಂಡ ಮಕ್ಕಳನ್ನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಮಕ್ಕಳು ಕೂಡ ಚೇತರಿಸಿಕೊಳ್ಳುತ್ತಿದ್ದಾರೆ. ಮಕ್ಕಳ ಅಸ್ವಸ್ಥತೆಗೆ ನಿಖರ ಕಾರಣವೇನೆಂದು ಇನ್ನು ತಿಳಿದು ಬಂದಿಲ್ಲ. ಆದ್ರೆ ಮಕ್ಕಳ ಊಟದಲ್ಲೋ ಅಥವಾ ಹಾಲಿನ ಪೌಡರ್ ನಿಂದಲೋ ಹೀಗೆ ಫುಡ್ ಪಾಯಿಸನ್ ಆಗಿರಬಹುದು ಎನ್ನಲಾಗಿದೆ.
ನಿನ್ನೆಯಷ್ಟೆ ದಾವಣಗೆರೆಯ ಜಗಳೂರು ವಸತಿ ವಸತಿ ಶಾಲೆಯಲ್ಲೂ 95 ಮಕ್ಕಳು ಅಸ್ವಸ್ಥರಾಗಿದ್ದರು. ರಾತ್ರಿ ಊಟ, ಬೆಳಗ್ಗೆ ಚಿತ್ರಾನ್ನ ತಿಂದಿದ್ದ ಮಕ್ಕಳು ವಾಂತಿ, ಬೇಧಿ ಮಾಡಿಕೊಂಡು ಹೊಟ್ಟೆ ನೋವಿನಿಂದ ಆಸ್ಪತ್ರೆ ಸೇರಿದ್ದವು. ಇದೀಗ ರಾಮನಗರದ ಸರ್ಕಾರಿ ಶಾಲೆಯಲ್ಲಿ ಇಂಥದ್ದೇ ಘಟನೆ ಸಂಭವಿಸಿದೆ.