ಹಾವೇರಿ: ಇತ್ತೀಚೆಗೆ ಈ ರೀತಿಯ ಸುದ್ದಿಗಳನ್ನ ಹೆಚ್ಚಾಗುತ್ತಿವೆ. ಕಳೆದ ಕೆಲವು ದಿನಗಳಿಂದ ವಸತಿ ಶಾಲೆ ಸೇರಿದಂತೆ ಎರಡ್ಮೂರು ಈ ರೀತಿಯ ಪ್ರಕರಣವನ್ನು ಕೇಳಿದ್ದೇವೆ. ಇದೀಗ ಮತ್ತೊಂದು ಅಂಥದ್ದೇ ಘಟನೆ ನಡೆದಿದೆ. ಮಧ್ಯಾಹ್ನದ ಬಿಸಿಯೂಟ ತಿಂದು 81 ಮಕ್ಕಳು ಅಸ್ವಸ್ಥರಾಗಿರುವ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ವೆಂಕಟಾಪುರ ತಾಂಡಾದಲ್ಲಿ ನಡೆದಿದೆ.
ಮಧ್ಯಾಹ್ನ ಎಂದಿನಂತೆ ಇಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಊಟ ಬಡಿಸಲಾಗಿದೆ. ಒಬ್ಬ ಬಾಲಕನಿಗೆ ಊಟ ಬಡಿಸುವಾಗ ತಟ್ಟೆಗೆ ಸತ್ತ ಹಲ್ಲಿ ಬಿದ್ದಿದೆ. ಅಷ್ಟರಲ್ಲಿ ಮಕ್ಕಳೆಲ್ಲಾ ಊಟ ತಿಂದಿದ್ದಾರೆ. ಒಬ್ಬ ಬಾಲಕನಿಗೆ ವಾಂತಿಯಾಗಿದೆ. ಹಲ್ಲಿ ನೋಡಿದ ಭಯಕ್ಕೇನೆ ಮಕ್ಕಳಿಗೆ ವಾಂತಿಯಾಗಿದೆ. ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಮಕ್ಕಳನ್ನ ಆಸ್ಪತ್ರೆಗೆ ಸೇರಿಸಲಾಗಿದೆ. ಸದ್ಯ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಡಿಡಿಪಿಐ ಅಂದಾನಪ್ಪ ವಡಗೇರಿ ಆಸ್ಪತ್ರೆಗೆ ಭೇಟಿ ನೀಡಿ, ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. ಅದರಲ್ಲಿ ಐದು ಮಕ್ಕಳು ತಲೆನೋವು, ವಾಂತಿಯಿಂದ ಅಸ್ವಸ್ಥರಾಗಿದ್ದಾರೆ. ಇನ್ನುಳಿದ ಮಕ್ಕಳು ಆರೋಗ್ಯವಾಗಿದ್ದಾರೆ.