ಬೆಂಗಳೂರು: ಶೈಕ್ಷಣಿಕ ವರ್ಷ ಮುಗಿದಿದೆ. ಹೊಸದಾಗಿ ಮಕ್ಕಳನ್ನು ಸೇರಿಸುವ ಪೋಷಕರಿಗೆ ಇಲ್ಲಿದೆ ಒಂದಷ್ಟು ಮಾಹಿತಿ. ಮೊದಲ ಬಾರಿಗೆ ಮಕ್ಕಳನ್ನು ಸೇರಿಸುವ ಪೋಷಕರು RTE ಅಡಿಯಲ್ಲಿ ಸೀಟಿಗಾಗಿ ಅರ್ಜಿ ಹಾಕುತ್ತಾ ಇರುತ್ತಾರೆ. ಇದೀಗ ದಾಖಲಾತಿ ಅರ್ಜಿಯನ್ನು ವಿಸ್ತರಣೆ ಮಾಡಲಾಗಿದೆ.
ಎರಡನೇ ಸುತ್ತಿನ ಸೀಟು ಹಂಚಿಕೆ ಜೂನ್ 6 ರಂದು ನಡೆಯಲಿದೆ. ಈ ಸುತ್ತಿನಲ್ಲಿ ಆಯ್ಕೆಯಾದವರನ್ನು ಜೂನ್ 15ರ ತನಕ ದಾಖಲಾತಿಗೆ ಅವಕಾಶ ನೀಡಲಾಗುತ್ತದೆ. RTE ಅಡಿ ಮಗುವನ್ನು ದಾಖಲಿಸಲು ದಾಖಲಾತಿ ವಿಸ್ತಾರಣೆ ಮಾಡಲಾಗಿದೆ. ಕಾಯ್ದೆಯಡಿ ಶಾಲೆಯಲ್ಲಿ ಇನ್ನೂ ದಾಖಲಾತಿ ಕೋರಲು ಅವಕಾಶವಿದೆ ಎಂದು ಸೂಚಿಸಿದ್ದಾರೆ.
ಆನ್ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಲಾಗಿದೆ. ಅದಕ್ಕೆಂದು ಮೇ 10ರ ತನಕ ಅವಕಾಶವಿತ್ತು. ಈಗ ಒಂದು ದಿನ ಹೆಚ್ಚು ಮಾಡಿದ್ದು, ಮೇ 11ರ ತನಕ ಅರ್ಜಿ ಪರಿಶೀಲನೆ ಮಾಡಲಾಗುತ್ತಿದೆ. ಮೇ 15ಕ್ಕೆ ಲಾಟರಿ ಪ್ರಕ್ರಿಯೆ ಮೂಲಕ ಅರ್ಹರ ಅಂತಿಮ ಪಟ್ಟಿ ಪ್ರಕಟವಾಗಲಿದೆ. ಆನ್ಲೈನ್ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ ಮಾಡಲಾಗುತ್ತದೆ. ಮೇ 18ಕ್ಕೆ ಸೀಟು ಹಂಚಿಕೆ ಮಾಡಲಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳು ಮೇ 19ರಿಂದ 29ರ ತನಕ ಅಡ್ಮಿಷನ್ ಆಗಬಹುದು. ಇನ್ನು ಈ ಬಾರಿ ಮಕ್ಕಳು ಅಡ್ಮಿಷನ್ ಆಗಬೇಕೆಂದರೆ ಆರು ವರ್ಷ ತುಂಬಿರಲೇಬೇಕು.